ಮುಂದುವರಿದಿರುವ ವಿಚಾರಣೆ,ಶರಣರ ಪರ ಜಾಮೀನಿಗೆ ಅರ್ಜಿ

ctdccccccccccc
Published on

ಚಿತ್ರದುರ್ಗ:ಪೋಕ್ಸೋ ಹಾಗೂ ಅಟ್ರಾಸಿಟಿ ಪ್ರಕರಣದಡಿ ಬಂಧಿತರಾಗಿರುವ ಮುರುಘಾ ಶರಣರನ್ನು ಇಂದು ಮುರುಘಾ ಮಠಕ್ಕೆ ಸ್ಥಳ ಮಹಜರಿಗೆ ಪೊಲೀಸರು ಕರೆದೊಯ್ಯಲಿದ್ದಾರೆ. ಶುಕ್ರವಾರ ಸಂಜೆ ತಮ್ಮ ಕಸ್ಟಡಿಗೆ ಶರಣರನ್ನು ಪಡೆದುಕೊಂಡ ಪೊಲೀಸರು ಅವರನ್ನು ಜಿಲ್ಲಾ ಸ್ಪತ್ರೆಯಿಂದ ರಾತ್ರಿ 8 ಗಂಟೆಗೆ ನಗರದ ಡಿವೈಎಸ್ಪಿ ಕಚೇರಿಗೆ ಕರೆದೊಯ್ಯುದು ಸುದೀಘ ಎರಡೂವರೆ ತಾಸಿಗೂ ಅಧಿಕ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.

ಬಳಿಕ ಅವರನ್ನು ಕಚೇರಿಯಲ್ಲೇ ಉಳಿಸಲಾಗಿದ್ದು,ಶರಣರ ಆರೋಗ್ಯ ನಿಗಾಕಕ್ಕೆ ವೈದ್ಯರೊಬ್ಬರ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿ ಅಲ್ಲಿಯೇ ಬೀಡು ಬಿಟ್ಟಿತ್ತು. ಬೆಳಗ್ಗೆ ಆರೂವರೆ,ಹತ್ತೂವರೆ ಹೊತ್ತಿಗೆ ಶರಣರ ಆರೋಗ್ಯವನ್ನು ಡಾ.ಸತೀಶ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು.

ತನಿಖಾಧಿಕಾರಿ ಡಿವೈಎಸ್ಪಿ ಅನಿಲ್‌ಕುಮಾರ್ ನೇತೃತ್ವದಲ್ಲಿ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆ ಇಂದು ಕೂಡ ಮುಂದುವರಿಯ ಲಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಸ್ವಾಮೀಜಿ ಬೆಳಗ್ಗೆ ಉಪಹಾರ ಸೇವಿಸಿದ್ದಾರೆ ಎಂದು ಪೊಲೀ ಸ್ ಮೂಲಗಳು ತಿಳಿಸಿವೆ. ಇಂದು ಕೋರ್ಟಿಗೆ ಶ್ರೀಗಳ ಪರವಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾಗಲಿದೆ. ಇನ್ನು ಬಂಧನಕ್ಕೆ ಒಳಗಾಗಿರುವ ವಾರ್ಡನ್ ರಶ್ಮಿ ಅವರನ್ನು ಪೊಲೀಸರು ತಮ್ಮ ಕಸ್ಟಡಿಗೆ ವಹಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಶರಣರನ್ನು ಇಂದು ಕೋರ್ಟಿಗೆ ಹಾಜರು ಪಡಿಸುವ ಸಾಧ್ಯತೆಗಳಿವೆ.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net