

ಗುಂಡ್ಲುಪೇಟೆ: ಬಂಡೀಪುರ ಕಾಡಂಚಿನ ತಾಲೂಕಿನ ದೇಶೀಪುರ ಕಾಲನಿಯ ಆದಿವಾಸಿ ಮಹಿಳೆ ಪುಟ್ಟಮ್ಮನನ್ನು ಕೊಂದಿದ್ದ ಹುಲಿ ಪತ್ತೆಗೆ ಅರಣ್ಯ ಇಲಾಖೆ ಮೂರನೇ ದಿನವೂ ಕಾರ್ಯಾಚರಣೆ ನಡೆಸಿದೆ.
ಘಟನೆ ನಡೆದ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿರುವ ಬೋನಿನ ಬಳಿಯೂ ಪ್ರಾಣಿಗಳು ಸುಳಿದಿಲ್ಲ. ಯಾವುದೇ ಕ್ಯಾಮರಾಗಳಲ್ಲಿ ಯಾವ ಪ್ರಾಣಿಯ ಚಿತ್ರವೂ ದಾಖಲಾಗಿಲ್ಲದಿರುವುದು ದತ್ತಾಂಶ ಪರಿಶೀಲಿಸಿದಾಗ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆಯೇ ಸಾಕಾನೆಗಳಾದ ಪಾರ್ಥಸಾರಥಿ ಹಾಗೂ ರೋಹಿತನ ನೆರವಿನಿಂದ ಕೂಂಬಿಂಗ್ ನಡೆಯಿತು.
ಪ್ರದೇಶದ ಸುತ್ತಲೂ 3 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮರಾ ಹಾರಿಸಿ ಹುಡುಕಾಟ ನಡೆಸಿದರೂ ಹುಲಿ ಪತ್ತೆಯಾಗಿಲ್ಲ. ಆದ್ದರಿಂದ ಇನ್ನು ಒಂದೆರಡು ದಿನಗಳ ಕಾಲ ಕೂಂಬಿಂಗ್ ಮುಂದುವರೆಸಲಾಗುವುದು ಎಂದು ಓಂಕಾರ್ ವಲಯಾರಣ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.
==============
ಫೋಟೋ: 23-ಜೂನ್-ಜಿಪಿಟಿ-2, ಗುಂಡ್ಲುಪೇಟೆ ತಾಲೂಕಿನ ದೇಶೀಪುರ ಕಾಲನಿಯಲ್ಲಿ ಆದಿವಾಸಿ ಮಹಿಳೆ ಬಲಿಪಡೆದ ಹುಲಿ ಪತ್ತೆಗೆ ಅಳವಡಿಸಿದ್ದ ಕ್ಯಾಮರಾಗಳ ದತ್ತಾಂಶವನ್ನು ಅರಣ್ಯ ಸಿಬ್ಬಂದಿ ಪರಿಶೀಲಿಸಿದರು.
2ಎ; ಹುಲಿ ಸೆರೆ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಆರ್‌ಎಫ್‌ಒ ಸತೀಶ್ ಕುಮಾರ್ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.
============