

ಕಲಬುರಗಿ: ಕಾರ್ಮೋಡದ ಮಧ್ಯೆ ತಂಪು ಗಾಳಿ ಸೂಸುವ ಜತೆಗೆ ಮಳೆ ಸಿಂಚನವೂ ಸೋಮವಾರ ಇಡೀ ದಿನ ಮುಂದುವರಿಯಿತು. ಮೂರು ದಿನದಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕೆರೆ-ಕಟ್ಟೆ, ನದಿ, ಹಳ್ಳಗಳಲ್ಲಿ ಜಲಧಾರೆ ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಸೋಮವಾರ ಬೆಳಗ್ಗೆಯಿಂದಲೇ ಕಾರ್ಮೋಡ ಕವಿದಿತ್ತು. ನಗರದ ಲಾಲ್‌ಗೇರಿ ವೃತ್ತ, ಸಿದ್ದಿಬಾಷಾ ದರ್ಗಾ, ಗೋಲ್ಡ್ ಹಬ್, ಸೂಪರ್ ಮಾರ್ಕೆಟ್, ಪ್ರಶಾಂತ ನಗರ, ಮಾಣಿಕೇಶ್ವರಿ ಕಾಲನಿ, ಹಳೇ ಜೇವರ್ಗಿ ರಸ್ತೆಯ ರೈಲ್ವೆ ಕೆಳಸೇತುವೆ ಸೇರಿ ತಗ್ಗು ಪ್ರದೇಶಗಳಲ್ಲಿ ಕೆಸರುಮಯ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಸೋಮವಾರ 13.6 ಎಂಎA ಮಳೆ ಸುರಿದಿದ್ದು, ಕಮಲಾಪುರ ತಾಲೂಕಿನ ಕಿಣ್ಣಿಸಡಕ್‌ನಲ್ಲಿ ಅತಿ ಹೆಚ್ಚು 55 ಮಿಮೀ ಮಳೆ ದಾಖಲಾಗಿದೆ.
ಭೇಟಿ ಸಂಪ್ರದಾಯ ಮುಂದುವರಿಕೆ: ದಶಕದ ಸಮಸ್ಯೆಯಾಗಿರುವ ಮಹಾನಗರದ ವಾರ್ಡ್ 37ರ ಜನತಾ ಲೇಔಟ್, ಮಹಾಲಕ್ಷಿö್ಮÃ ಲೇಔಟ್, ಲಾಲ್‌ಗೇರಿ ವೃತ್ತದಲ್ಲಿ ನೀರು ಸಂಗ್ರಹವಾಗಿದ್ದ ಸ್ಥಳಕ್ಕೆ ಭೇಟಿ ನೀಡುವ ಸಂಪ್ರದಾಯವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಸೋಮವಾರವೂ ಮುಂದುವರಿಸಿದರು. ಶಾಸಕರಾಗುವ ಮುನ್ನವೂ ಮಳೆಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ ಪಾಲಿಕೆ, ಅಂದಿನ ಶಾಸಕರ ಕಾರ್ಯವೈಖರಿ ಬಗ್ಗೆ ಕಿಡಿಕಾರಿ ಸ್ಥಳದಲ್ಲೇ ಸುದ್ದಿಗೋಷ್ಠಿ ನಡೆಸಿದ್ದರು. ಇದೀಗ ಅವರೇ ಶಾಸಕರಾಗಿ ಒಂದೂವರೆ ವರ್ಷವಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊAಡಿಲ್ಲ. ಇಂಥದರಲ್ಲಿ ಪುನಃ ಆ ಸ್ಥಳಕ್ಕೆ ಭೇಟಿ ನೀಡುವ ಸಂಪ್ರದಾಯ ಪೂರ್ಣಗೊಳಿಸಿದ್ದು, ಪರಿಹಾರ ಯಾವತ್ತು ಒದಗಿಸುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.