

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಶುಕ್ರವಾರ ಸಂಜೆ ಏಕಾಏಕಿ ಮಳೆ ಸುರಿದು ಅಡಚಣೆ ಉಂಟು ಮಾಡಿತು. ಧಾರಾಕಾರ ಮಳೆಯಿಂದ ನಗರದಲ್ಲಿ ಮತ್ತೆ ಎಂದಿನ0ತೆ ಚರಂಡಿಗಳು ತುಂಬಿ ಹರಿದವು. ಹೂಳು ತುಂಬಿಕೊ0ಡಿರುವುದರಿ0ದ ಚರಂಡಿ ನೀರು ರಸ್ತೆ ಮೇಲೆ ಹರಿಯಿತು. ನಗರದ ಎನ್‌ಟಿಟಿಎಫ್ ಎದುರಿನ ಗಣೇಶ ದೇವಸ್ಥಾನದ ಎದುರು ಮತ್ತೆ ಚರಂಡಿ ನೀರು ರಸ್ತೆ ಮೇಲೆ ಹರಿಯಿತು. ಬಿಆರ್‌ಟಿಎಸ್ ಪಥಗಳು ಹಾಗೂ ಸಾರ್ವಜನಿಕ ವಾಹನಗಳು ಸಂಚರಿಸುವ ರಸ್ತೆ ಗಂಟೆಗಟ್ಟಲೇ ಜಲಾವೃತವಾಗಿತ್ತು. ಇಲ್ಲಿ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಇಲ್ಲದಿರುವುದರಿಂದ ಬಿಆರ್‌ಟಿಎಸ್‌ನ ಅವಾಂತರ ಮತ್ತೊಮ್ಮೆ ದೃಢವಾಯಿತು. ಸಂಜೆ ವೇಳೆ ವಾಹನ ದಟ್ಟಣೆ ಇರುವ ಈ ರಸ್ತೆ ಜಲಾವೃತವಾಗಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.