

ಕಾಗವಾಡ: ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಗಾರ ಖುರ್ದ ಪುರಸಭೆ, ಕಾಗವಾಡ, ಐನಾಪುರ ಮತ್ತು ಶೇಡಬಾಳ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಪಟ್ಟಣ ಪಂಚಾಯಿತಿ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರಿಯಿತು.
ಸರ್ಕಾರಿ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಪೌರಕಾರ್ಮಿಕರಿಗೂ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಚಾಲಕರು, ಮಾಲಿ, ಕ್ಲೀನರ್ಸ್, ಸ್ವಚ್ಛತಾ ಮೇಲ್ವಿಚಾರಕರು, ಒಳಚರಂಡಿ ಸ್ವಚ್ಛತಾ ಸಹಾಯಕರು ಸೇರಿ ವಿವಿಧ ವೃಂದದವರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿದರು.
ಪೌರನೌಕರ ಸಂಘದ ಅಧ್ಯಕ್ಷ ಈರಗೌಡ ಪಾಟೀಲ, ಉಪಾಧ್ಯಕ್ಷ ದಿಲೀಪ ಕಾಂಬಳೆ, ಸಾಯಿಲ ಪಾಟೀಲ, ಸುಭಾಷ ತುಪಳೆ, ರಮೇಶ ಪಾಟೀಲ, ಮಧುಕರ ಕಾಂಬಳೆ, ಶ್ರೀಮಂತ ಕಾಂಬಳೆ, ಆಕಾಶ ಧೋಡಾರೆ, ಗಣೇಶ ಕಾಂಬಳೆ, ಭರತೇಶ ಗಣಿ, ನಿಲೇಶ ಪಾಟೀಲ, ಮಹಮ್ಮದ್ ಜಮಾದಾರ, ದಯಾನಂದ ಕಾಂಬಳೆ, ರಾಕೇಶ ಬೆಕ್ಕೇರಿ, ಶೋಭಾ ಧೋಡಾರೆ, ನೀಲಬಾಯಿ ಘೋರಡೆ, ಮನಿಷಾ ಕಾಂಬಳೆ ಇತರರಿದ್ದರು.