

ಬೈಲಹೊಂಗಲ: ಪಟ್ಟಣದ ಹರಳಯ್ಯ ಕಾಲನಿ ನಿವಾಸಿಗಳು ಎಸಿ ಕಚೇರಿ ಮುಂಭಾಗದಲ್ಲಿ ಬುಧವಾರದಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮುಂದುವರಿದಿದ್ದು, ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿ ಎಸಿ ಪ್ರಭಾವತಿ ಕೀರಪೂರಗೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ಅಂಬೇಡ್ಕರ್ ಯುವ ಸೇನೆಯ ರಾಜ್ಯ ಉಪಾಧ್ಯಕ್ಷ ಪರಶುರಾಮ ರಾಯಬಾಗ, ವಿಭಾಗೀಯ ಅಧ್ಯಕ್ಷ ಮಾರುತಿ ಕೊಂಡೂರ ಮಾತನಾಡಿ, 40 ವರ್ಷಗಳಿಂದ ವಾಸವಾಗಿರುವ ನಿವಾಸಿಗಳಿಗೆ ಹಕ್ಕು ನೀಡಬೇಕಾಗಿದೆ. ಸರ್ಕಾರದಲ್ಲಿ ಇದಕ್ಕೆ ಅವಕಾಶವಿದ್ದು, ಕೊಳೆಗೇರಿ ಅಭಿವದ್ಧಿ ನಿಗಮದ ಅಧಿಕಾರಿಗಳು, ಶಾಸಕರು ನಿರ್ಲಕ್ಷಿಸುತ್ತಿದ್ದಾರೆ. ನ್ಯಾಯ ಸಿಗುವವರೆಗೆ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ. ಪ್ರಾಣಕ್ಕೆ ಆಪತ್ತು ಬಂದರೆ ಅಧಿಕಾರಿಗಳು, ಶಾಸಕರೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಎಸಿ ಪ್ರಭಾವತಿ ಕೀರಪೂರ ಹೊರತಾಗಿ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿಲ್ಲ ಎಂದರು.
ಕರ್ನಾಟಕ ಅಂಬೇಡ್ಕರ್ ಯುವ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ ಚಿಕ್ಕನ್ನವರ, ಸುನೀಲ ಹಲಗಿ, ಲಕ್ಷ್ಮೀ ರಾಯಬಾಗ, ಆಯಿಶಾ ಅನ್ಸಾರಿ, ದೇವೇಂದ್ರ ಕಕ್ಕಯ್ಯನವರ, ಪುಂಡಲೀಕ ರಾಯಬಾಗ, ರಾಮು ಕಳಮಕರ, ಶಿವಾನಂದ ದಳವಾಯಿ, ರಫೀಕ್ ಅನ್ಸಾರಿ, ವಿನೋದ ಸವದತ್ತಿ, ಭರಮಪ್ಪ ತೋರಗಲ, ಉಮೇಶ ದೊಡಮನಿ, ರಿಯಾಜ್ ಅನ್ಸಾರಿ, ಖುರ್ಷಿದಾಬಾನು ಸಯ್ಯದ್, ಯಲ್ಲವ್ವ ಭಜಂತ್ರಿ, ಪಾರ್ವತಿ ಮಹಿಮನಾರ, ಕರುಣಾ ಅಗಾಸಿ, ಮೆಹಬೂಬಿ ಸಯ್ಯದ್, ಮಮ್ತಾಜ್ ನಿಬಂದ, ಈರಮ್ಮ ದಳವಾಯಿ, ತುಳಸಾಬಾಯಿ ರಾಯಬಾಗ, ಮಕ್ತುಮಬಿ ಮುಜಾವರ ಇತರರು ಇದ್ದರು.