ಮುಂದುವರಿದ ಕೆಂಪು ಮಣ್ಣಿಗೆ ಖನ್ನ

03-07--krs3
Published on

ಕೆ.ಆರ್.ಸಾಗರ: ಇಲ್ಲಿನ ಅಣೆಕಟ್ಟಿನ ಹಿನ್ನೀರಿನಲ್ಲಿ ಕೆಂಪು ಮಣ್ಣು ದೋಚುವ ದಂಧೆ ಮುಂದುವರಿದಿದೆ.

ಹಲವು ದಿನಗಳ ಹಿಂದೆ ಹಿನ್ನೀರಿನಲ್ಲಿ ಅಕ್ರಮವಾಗಿ ಕೆಂಪು ಮಣ್ಣು ತೆಗೆದವರ ವಿರುದ್ಧ ಇಲವಾಲ ಮತ್ತು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಕೆಲವರು ಹೊಸಕೋಟೆ ಬಳಿ ಸೋಮವಾರ ಮತ್ತೆ ಜೆಸಿಬಿ, ಟ್ರಾೃಕ್ಟರ್, ಟಿಪ್ಪರ್ ಬಳಸಿ ಮಣ್ಣು ತೆಗೆಯುವ ಕೆಲಸಕ್ಕೆ ಮುಂದಾಗಿದ್ದಾರೆ.
ಮಾಹಿತಿ ಮೇರೆಗೆ ಕಾವೇರಿ ನೀರಾವರಿ ನಿಗಮ ಸಹಾಯಕ ಕಾರ್ಯಪಾಲಕ ಅಭಿಯಂತರ ಕಿಶೋರ್‌ಕುಮಾರ್ ಮತ್ತು ಸಹಾಯಕ ಅಭಿಯಂತರ ಸುರೇಶ್‌ಬಾಬು ಹಾಗೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರು ದಾಳಿ ನಡೆಸಿ ಹಿನ್ನೀರಿನಲ್ಲಿ ಮಣ್ಣು ತೆಗೆಯುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net