

ಗದಗ: ಜಿಲ್ಲೆಯಲ್ಲಿ ಕರೊನಾ ವೈರಸ್ ನಾಗಾಲೋಟ ಮುಂದುವರಿದಿದ್ದು, ಸೋಮವಾರ 63 ಜನರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1067ಕ್ಕೇರಿದ್ದು, 658 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ 386 ಜನರು ಗುಣವಾಗಿ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ ಕೋವಿಡ್-19 ಪ್ರಕರಣ ಪತ್ತೆಯಾದ ಪ್ರದೇಶಗಳು ಇಂತಿವೆ:
ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಹೆಲ್ತ್ ಕ್ಯಾಂಪ್, ಕನ್ಯಾಳ ಅಗಸಿ, ಸಾಯಿಬಾಬಾ ದೇವಸ್ಥಾನ ಹತ್ತಿರ, ಹುಡ್ಕೋ ಕಾಲನಿ, ಚಿದಾನಂದ ಮಠ ಹತ್ತಿರ, ಸಿದ್ದಲಿಂಗನಗರ, ಜಿಮ್ಸ್ ಆಸ್ಪತ್ರೆ, ಜವಳ ಗಲ್ಲಿ, ಕಳಸಾಪೂರ ರಸ್ತೆ, ಸಾಯಿ ನಗರ 2ನೇ ಕ್ರಾಸ್, ಜಿಮ್ಸ್ ಬಾಲಕಿಯರ ಹಾಸ್ಟೆಲ್, ಎಸ್.ಎಸ್.ಬಿ ಕಾಲನಿ, ಹುಡ್ಕೋ ಕಾಲನಿ, ಹಾತಲಗೇರಿ ನಗರ, ಕೆಸಿ ರಾಣಿ ರಸ್ತೆ, ಗಂಗಿ ಮಡಿ, ರಂಗನವಾಡಿ, ಕಾಗದಗೇರಿ ಓಣಿ, ತುಳಜಾ ಭವಾನಿ ದೇವಸ್ಥಾನ ಹತ್ತಿರ, ಕಿಲ್ಲಾ ಓಣಿ ಹಾಗೂ ಗದಗ ತಾಲೂಕಿನ ಸೂಡಿ, ಕಳಸಾಪೂರದಲ್ಲಿ ಸೋಂಕು ಪತ್ತೆಯಾಗಿದೆ.
ಮುಂಡರಗಿ ಪಟ್ಟಣದ ಕಡ್ಲಿ ಪೇಟೆ, ವಿವೇಕಾನಂದ ನಗರ, ಮುಂಡರಗಿ ತಾಲೂಕಿನ ಡೋಣಿ, ಜಾಲವಾಡಿಗಿ, ಕೊರ್ಲಹಳ್ಳಿಯಲ್ಲಿ ಸೋಂಕು ಪತ್ತೆಯಾಗಿದೆ.
ಗಜೇಂದ್ರಗಡ ತಾಲೂಕಿನ ರಾಜೂರ, ಗಜೇಂದ್ರಗಡ ಪಟ್ಟಣದ ಬಸವೇಶ್ವರ ನಗರದಲ್ಲಿ ಪಾಸಿಟಿವ್ ಕೇಸ್ ದಾಖಲಾಗಿವೆ. ರೋಣ ತಾಲೂಕಿನ ಬೇವಿನಕಟ್ಟಿ, ಬೆಳವಣಿಕಿಯಲ್ಲಿ ಸೋಂಕು ಪತ್ತೆಯಾಗಿದೆ.
ಲಕ್ಷ್ಮೇಶ್ವರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಹತ್ತಿರ, ಅಸ್ರಾ ಓಣಿಯಲ್ಲಿ ಕೋವಿಡ್-19 ಕೇಸ್ ದಾಖಲಾಗಿವೆ.
ನರಗುಂದ ಪಟ್ಟಣದ ವಿನಾಯಕ ನಗರ, ವಿವೇಕಾನಂದ ನಗರ, ನರಗುಂದ ತಾಲೂಕಿನ ಚಿಕ್ಕನರಗುಂದ, ಶಿರಹಟ್ಟಿ ಪಟ್ಟಣದಲ್ಲಿ ಜನರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮೃತರ ವಿವರ: ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ನಿವಾಸಿ 65 ವರ್ಷದ ಮಹಿಳೆ ಜುಲೈ 25ರಂದು ಮೃತಪಟ್ಟಿದ್ದಾರೆ. ಅವರಿಗೆ ಕೋವಿಡ್-19 ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜುಲೈ 15 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 16 ರಂದು ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಪಾರ್ಶ್ವವಾಯು ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಜುಲೈ 25 ರಂದು ಸಾವನ್ನಪ್ಪಿದರು ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಯನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.