

ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿ ಇಡೀ ಪಕ್ಷ ಸಿದ್ದರಾಮಯ್ಯ ಅವರ ಹಿಂದೆ ಇದೆ. ಮುಂದಿನ ೧೦ ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು. ಹಾಗಾದರೆ ಐದು ವರ್ಷ ಸಿದ್ದರಾಮಯ್ಯ ಸಿಎಂ ಖಚಿತವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ `೧೦ ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂದರೆ ವಿನಾಃ, ಪ್ರಶ್ನೆಗೆ ಉತ್ತರ ನೀಡಲಿಲ್ಲ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್, ಸಚಿವರು, ಶಾಸಕರು ಮುಖ್ಯಮಂತ್ರಿ ಬೆಂಬಲಕ್ಕೆ ಇದ್ದೇವೆ. ನಮ್ಮ ಹೋರಾಟ ನಿರಂತರ ಇರಲಿದೆ. ದೇಶದಲ್ಲಿ ಇಂಡಿಯಾ ಒಕ್ಕೂಟ ಇದೆ. ನಾವು ಈಗಾಗಲೇ ಹೋರಾಟ ಆರಂಭಿಸಿದ್ದೇವೆ. ಪಶ್ಚಿಮ ಬಂಗಾಳ ಸೇರಿ ರಾಜ್ಯಪಾಲರುಗಳು ಏನು ಮಾಡುತ್ತಿದ್ದಾರೆ ನೋಡಿ ತಿಳಿದುಕೊಳ್ಳಿ ಎಂದರು.
ಶಾಸಕಾಂಗ ಸಭೆ ಮುಗಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿ ಅಲ್ಲಿನ ನಾಯಕರಿಗೆ ಮೂಡಾ ಪ್ರಕರಣದ ಸಂಪೂರ್ಣ ಮಾಹಿತಿ ನೀಡಲಿz್ದÁರೆ. ಇದಕ್ಕೆ ವಿಶೇಷ ಅರ್ಥವಿಲ್ಲ. ಮೈಸೂರಿನಲ್ಲಿ ಆಸ್ತಿ ಕಳಕೊಂಡಿದ್ದು ಪಾರ್ವತಿಯವರು. ಅವರಿಗೆ ನಿವೇಶನ ಹಂಚಿಕೆ ಮಾಡಿದ್ದು ಬಿಜೆಪಿ ಸರ್ಕಾರವಿದ್ದಾಗ. ಇದಕ್ಕೆ ಪರಿಹಾರ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿಲ್ಲ. ಇದರಿಂದ ಹೆದರಿಕೆಯ ಪ್ರಶ್ನೆಯೇ ಬರುವುದಿಲ್ಲ ಎಂದರು.
ಮುಖ್ಯಮAತ್ರಿಗಳೇ ಸ್ವತಃ ತನಿಖೆಗೆ ಆದೇಶಿಸಿದ್ದಾರೆ. ಹೆದರುವ ಗುಣ ಸಿದ್ದರಾಮಯ್ಯ ಅವರ ರಕ್ತದಲ್ಲಿ ಇಲ್ಲ. ಎಲ್ಲಿ ನ್ಯಾಯ ಇದೆಯೋ ಅಲ್ಲಿ ಜಯ ಇದೆ ಎಂದರು.