

ಹಾಸನ: ಪ್ರತಿ ವರ್ಷ ಹಾಸನಾಂಬೆ ಗರ್ಭಗುಡಿಯ ಬಾಗಿಲನ್ನು ತೆಗೆಯಲಾಗುತ್ತಿದ್ದು, ಈ ವೇಳೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳುವ ಮೂಲಕ ಕಛೇರಿಯಲ್ಲಿ ಯಾವ ಕೆಲಸ ನಡೆಯುತ್ತಿಲ್ಲ. ಇನ್ನು ಮುಂದೆ ದೇವಾಲಯಕ್ಕೆ ಸಾರ್ವಜನಿಕರನ್ನು ಸೇವೆಗೆ ಬಳಸಿಕೊಳ್ಳುವಂತೆ ಸಾಮಾಜಿಕ ಹೋರಾಟಗಾರ ಪ್ರವೀಣ್ ಗೌಡ ಮನವಿ ಮಾಡಿದರು.
ಕಳೆದ ಎರಡು ವರ್ಷಗಳಿಂದ ಹಾಸನಾಂಬ ಉತ್ಸವ ಅದ್ದೂರಿಯಾಗಿ ನಡೆಯುತ್ತಿರುವುದು ಶ್ಲಾಘನೀಯ, ಲಕ್ಷಾಂತರ ಭಕ್ತಾದಿಗಳು ದೇವಾಲಯಕ್ಕೆ ಬರುತ್ತಿದ್ದ ಆದಾಯವು ಕೂಡ ದುಪ್ಪಟ್ಟಾಗಿದೆ. ಈ ಎಲ್ಲಾ ವಿಚಾರಗಳು ಜಲ್ಲೆಯ ಜನತೆ ಹೆಮ್ಮೆ ಪಡುವಂತ ವಿಚಾರ. ಆದರೆ ಜಿಲ್ಲಾಡಳಿತ ನಡೆದುಕೊಳ್ಳುವ ರೀತಿ ಎಲ್ಲರಿಗೂ ಬೇಸರ ತಂದಿದೆ. ಪ್ರತಿವರ್ಷ ಒಂದಿಲ್ಲ ಒಂದು ಸಮಸ್ಯೆಗಳು ದೇವಾಲಯದ ಉತ್ಸವದ ವೇಳೆ ನಡೆಯುತ್ತಲೇ ಇರುತ್ತದೆ. ಇದಕ್ಕೆ ಈ ವರ್ಷವೂ ನಡೆದಿರುವ ಅನೇಕ ಅಹಿತಕರ ಘಟನೆಗಳು ಸಾಕ್ಷಿಯಾಗಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಾಸನಾಂಬ ಉತ್ಸವಕ್ಕೆ ಈ ಬಾರಿ ಭಕ್ತರ ದರ್ಶನಕ್ಕಾಗಿ ಪ್ರಿಂಟ್ ಮಾಡಿಸಲಾಗಿದಂತಹ ವಿಐಪಿ ಹಾಗೂ ವಿವಿಐಪಿ ಪಾಸ್ ಗಳು ವ್ಯಾಪಕವಾಗಿ ಹಂಚಿಕೆಯಾಗಿ ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಮನಬಂದಂತೆ ಹಂಚಿಕೆ ಮಾಡಿ ಉತ್ಸವದ ರೂಪವನ್ನೇ ಹಾಳು ಮಾಡಿದ್ದಾರೆ ಎಂದು ದೂರಿದರು. ಮುಂದಿನ ವರ್ಷದಿಂದ ಪಾಸ್‌ಗಳನ್ನು ನಿಷೇಧೆ ಮಾಡಬೇಲು ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವು ಎಂದು ಎಚ್ಚರಿಸಿದರು.