ಮುಂದಿನ ಬಾರಿ ಚಿನ್ನದ ಸಾಧನೆ ಮಾಡುವೆ: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಯೋಗಪಟು ನಿರ್ಮಲಾ ವಿಶ್ವಾಸ

WEB SGRR
Published on

ಸಾಗರ: ರಾಷ್ಟ್ರೀಯ ಕ್ರೀಡಾಕೂಟದ ಯೋಗಸನಾ ಸ್ಪಧೆರ್ಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ, ಕಂಚಿನ ಪದಕ ಗೆದ್ದಿರುವುದು ಸಂತೋಷ ತಂದಿದ್ದು ಜವಾಬ್ದಾರಿ ಹೆಚ್ಚಿಸಿದೆ ಕಂಚಿನ ಪದಕ ವಿಜೇತೆ ನಿರ್ಮಲಾ ಎಸ್.ಕೊಡ್ಲಿಕರ್ ಹೇಳಿದರು.

ನಗರದ ವನಶ್ರೀ ಶಿಕ್ಷಣ ಸಂಸ್ಥೆಯಿಂದ ಗುರುವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕಂಚಿನ ಪದಕ ಗೆದ್ದಿರುವುದು ನನಗೆ ಸಂತೋಷ ತಂದಿದ್ದರೂ, ಮುಂದಿನ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವನಶ್ರೀ ಸಂಸ್ಥಾಪಕ ಎಚ್.ಪಿ.ಮಂಜಪ್ಪ ಮಾತನಾಡಿ, ಗುಜರಾತ್‌ನಲ್ಲಿ ಆಯೋಜಿಸಿದ್ದ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಸಾಗರದ ಯೋಗಪಟು ನಿರ್ಮಲಾ ಕಂಚಿನ ಪದಕ ಗೆಲ್ಲುವ ಮೂಲಕ ಸಾಗರಕ್ಕೆ ಕೀರ್ತಿ ತಂದಿದ್ದಾರೆ. ಇಂದಿರಾಗಾಂಧಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಅಭ್ಯಾಸ ಮಾಡುತ್ತಿರುವ ನಿರ್ಮಲಾ ಸಾಗರದ ಹುಡುಗಿ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ಕಳೆದ 11 ವರ್ಷದಿಂದ ವನಶ್ರೀಯಲ್ಲಿ ನಿರ್ಮಲಾ ಯೋಗಾಭ್ಯಾಸ ಮಾಡುತ್ತಿದ್ದಾರೆ. ಈತನಕ ನಿರ್ಮಲಾ ವಿವಿಧ ಸ್ಪರ್ಧೆಗಳಲ್ಲಿ 200ಕ್ಕೂ ಹೆಚ್ಚು ಪದಕ ಜಯಿಸಿದ್ದಾರೆ. ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಸಹ ಪಾಲ್ಗೊಳ್ಳುವ ಅರ್ಹತೆಯನ್ನು ನಿರ್ಮಲಾ ಗಳಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net