ಮುಂದಿನ ಪೀಳಿಗೆಗೆ ಸಂಪದ್ಭರಿತ ಅರಣ್ಯವನ್ನು ಉಳಿಸಿ

HUN-FEB-12-1(BIRD CENSUS AT VEERANAHOSALLI)
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯಕೇಂದ್ರದಲ್ಲಿ ಆಯೋಜಿಸಿದ್ದ ಪಕ್ಷಿ ಸಮೀಕ್ಷೆ ಸಮಾರೋಪ ಸಮಾರಂಭದಲ್ಲಿ ಪಕ್ಷಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸ್ವಯಂಸೇವಕರು.
Published on

ಹುಣಸೂರು: ಕಾಡಂಚಿನ ಗ್ರಾಮದ ಜನರ ಮತ್ತು ಅರಣ್ಯ ಇಲಾಖೆಯ ಬಹಳಷ್ಟು ಸಿಬ್ಬಂದಿಗಳ ತ್ಯಾಗ ಮತ್ತು ಬಲಿದಾನಗಳಿಂದಾಗಿ ಅರಣ್ಯ ಉಳಿದಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಮನೋಜ್‌ಕುಮಾರ್ ಅಭಿಪ್ರಾಯಪಟ್ಟರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ 2023ನೇ ಸಾಲಿನ ಪಕ್ಷಿ ಸಮೀಕ್ಷೆ ಕಾರ್ಯದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಗಳು ಅರಣ್ಯ ಸಂರಕ್ಷಣೆಗಾಗಿ ಜಾರಿಗೊಳಿಸಿದ ಕಾಯ್ದೆಗಳು ಒಂದೆಡೆಯಾದರೆ, ಮತ್ತೊಂದೆಡೆ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯ ಸಾರ್ವಜನಿಕರ ಸಸಹಭಾಗಿತ್ವ, ಜೀವಬಲಿದಾನಗಳು ಇಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನವನ್ನು ಸಂಪದ್ಭರಿತ ಮತ್ತು ಸಮತೋಲಿತ ಅರಣ್ಯವನ್ನಾಗಿಸಿದೆ. ಪಕ್ಷಿ ಸಮೀಕ್ಷೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಕಳೆದ ಮೂರು ವರ್ಷಗಳಿಂದ ಸ್ವಯಂಸೇವಕರೊಂದಿಗೆ ಉತ್ತಮವಾಗಿ ಸಮೀಕ್ಷಾ ಕಾರ್ಯ ನಡೆದಿದೆ. ಮುಂದಿನ ಪೀಳಿಗೆಗೆ ಸಂಪದ್ಭರಿತ ಅರಣ್ಯವನ್ನು ಉಳಿಸಿ ಹೋಗುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎನ್ನುವುದನ್ನು ನಾವು ಮರೆಯಬಾರದೆಂದರು.

ನಾಗರಹೊಳೆ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್ ನರಗುಂದ ಅಧ್ಯಕ್ಷತೆ ವಹಿಸಿದ್ದರು. ಪಕ್ಷಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸ್ವಯಂಸೇವಕರಾದ ಯೋಗೀಶ್, ಕಿರಣ್, ನವೀನ್, ಶುಭಾ, ದಿವ್ಯಾ, ಕಶ್ಯಪ್, ನಾಗರಾಜ್ ಮುಂತಾದವರು ಪಕ್ಷಿ ಸಮೀಕ್ಷೆ ವೇಳೆ ತಮಗಾದ ಅನುಭವಗಳನ್ನು ಹಂಚಿಕೊಂಡರು.

ಎಸಿಎಫ್ ದಯಾನಂದ್, ಗೋಪಾಲ್, ಆರ್‌ಎಫ್‌ಒಗಳಾದ ನವೀನ್ ರಾವತ್, ರತನ್, ಸಿದ್ದರಾಜು, ಹರ್ಷಿತಾ, ನ್ಯಾಚುರಲಿಸ್ಟ್ ಗೋಪಿ, ಡಿಆರ್‌ಎಫ್‌ಒಗಳು ಮತ್ತು ಸ್ವಯಂಸೇವಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net