ಮುಂಡುಗ ಹಾಕಿದ ಮಲೆನಾಡಿಗರು

bhr deepav
ಬಾಳೆಹೊನ್ನೂರಿನ ಮನೆಯೊಂದರಲ್ಲಿ ನರಕ ಚತುರ್ದಶಿ ಹಿನ್ನೆಲೆಯಲ್ಲಿ ಮಲೆನಾಡಿನ ಸಂಪ್ರದಾಯದಂತೆ ಮುಂಡುಗ (ಹೂ) ಗಿಡ ಹಾಕಿರುವುದು.
Published on

ಬಾಳೆಹೊನ್ನೂರು: ಹೋಬಳಿಯಾದ್ಯಂತ ಬೆಳಕಿನ ಹಬ್ಬ ದೀಪಾವಳಿಗೆ ಗುರುವಾರ ಸಂಭ್ರಮದ ಚಾಲನೆ ದೊರೆಯಿತು. ನರಕ ಚತುರ್ದಶಿ ಅಂಗವಾಗಿ ಎಲ್ಲ ಮನೆಗಳಲ್ಲಿ ಮನೆಮಂದಿಯೆಲ್ಲ ಮುಂಜಾನೆ ಅಭ್ಯಂಜನ ಮಾಡಿದರು. ಮಲೆನಾಡಿನ ಸಂಪ್ರದಾಯದಂತೆ ಮುಂಡುಗ (ಹೂ) ಹಾಕುವ ಕಾರ್ಯ ನಡೆಸಿದರು. ಮನೆಗಳ ಮುಂಭಾಗ, ಕೃಷಿ ಜಮೀನು, ನೀರಿನ ಮೂಲ, ದೇವಾಲಯಗಳ ಬಳಿ ಅಲಂಕರಿಸಿದ್ದ ಮುಂಡುಗವನ್ನು ಇಟ್ಟು ಪೂಜಿಸಿದರು.

ಚತುರ್ದಶಿಯಂದು ಮನೆಯಲ್ಲಿ ಚೀನೀಕಾಯಿ ಕಡುಬು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಮನೆಮಂದಿಯೆಲ್ಲ ಸವಿದರು. ಅಭ್ಯಂಜನಕ್ಕೆ ಪೂರ್ವಭಾವಿಯಾಗಿ ಬುಧವಾರ ಮನೆಗಳಲ್ಲಿ ನೀರು ತುಂಬುವ ಹಬ್ಬ, ರಾತ್ರಿ ಬೂರೆ ಹಬ್ಬ ನಡೆಯಿತು.

ಅಮಾವಾಸ್ಯೆ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು, ಬ್ಯಾಂಕ್, ಕಚೇರಿಗಳಲ್ಲಿ ಧನಲಕ್ಷ್ಮೀ ಪೂಜೆ ನಡೆಯಿತು. ಇದಕ್ಕಾಗಿ ಅಂಗಡಿಗಳ ಮಾಲೀಕರು ಅಂಗಡಿಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣ, ಹೂಗಳನ್ನು ಕಟ್ಟಿ ಅಲಂಕರಿಸಿದ್ದರು. ಪಟ್ಟಣದಲ್ಲಿ ಪಟಾಕಿ ವ್ಯಾಪಾರ, ಹೂ, ಹಣ್ಣು ಮಾರಾಟ ಭರ್ಜರಿಯಾಗಿ ನಡೆದಿದ್ದು, ಪಟ್ಟಣದ ಮುಖ್ಯರಸ್ತೆಯ ಬದಿಗಳಲ್ಲಿ ತಾತ್ಕಾಲಿಕವಾಗಿ ತರಕಾರಿ, ಹಣ್ಣು, ಹೂವಿನ ಅಂಗಡಿಗಳು ತಲೆ ಎತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net