ಮುಂಡರಗಿಯಲ್ಲಿ ಗುಡುಗು ಸಹಿತ ಮಳೆ

20MDG4
Published on

ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಮಂಗಳವಾರ ರಭಸದಿಂದ ಮಳೆ ಸುರಿಯಿತು.

ಬೆಳಗ್ಗೆ 6ಗಂಟೆಯಿಂದ 8 ಗಂಟೆಯವರೆಗೆ ಮತ್ತು ಮಧ್ಯಾಹ್ನ ಗುಡುಗು, ಮಿಂಚು ಸಹಿತ ಮಳೆ ಸುರಿಯಿತು. ಮಳೆಯಿಂದ ಪಟ್ಟಣದಲ್ಲಿನ ಚರಂಡಿಗಳೆಲ್ಲ ತುಂಬಿ ಹರಿದವು. ಹಲವು ಕಡೆ ರಸ್ತೆಯ ಮೇಲೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ವಿವಿಧೆಡೆ ಮನೆ ಗೋಡೆ, ಮೇಲ್ಛಾವಣಿಗಳು ಕುಸಿದು ಬೀಳುತ್ತಿವೆ. ಬೆಳೆಗಳು ಹಾನಿಯಾಗುವ ಹಂತಕ್ಕೆ ತಲುಪಿವೆ. ಉಳ್ಳಾಗಡ್ಡಿ, ಶೇಂಗಾ, ಹತ್ತಿ, ಗೋವಿನಜೋಳ, ಸೂರ್ಯಕಾಂತಿ ಮೊದಲಾದ ಬೆಳೆಗಳು ಅತಿ ಹೆಚ್ಚು ತೇವಾಂಶದಿಂದ ಹಾನಿಯಾಗುತ್ತಿವೆ. ನಿರಂತರ ಸುರಿದ ಮಳೆ, ಗಾಳಿಯಿಂದ ತುಂಗಭದ್ರಾ ನದಿ ಭಾಗದ ಹಲವು ಗ್ರಾಮಗಳಲ್ಲಿನ ಭತ್ತದ ಬೆಳೆ ನೆಲಕಚ್ಚುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net