ಮುಂಟಿಪಾಳ್ಯದಲ್ಲಿ ಕ್ಯಾತಸ್ವಾಮಿ ಕೊಂಡೋತ್ಸವ

14 yelandur 02
Published on

ಯಳಂದೂರು: ಸಮೀಪದ ಮುಂಟಿಪಾಳ್ಯ ಗ್ರಾಮದಲ್ಲಿ ಸೋಮವಾರ ಸಂಜೆ ಕ್ಯಾತಸ್ವಾಮಿ ಕೊಂಡೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಸಂಪ್ರದಾಯದಂತೆ ಭಾನುವಾರ ಗ್ರಾಮಸ್ಥರು ದೇವಸ್ಥಾನದ ಸುತ್ತಮುತ್ತಲಿನಲ್ಲಿ ಬೆಳೆದಿರುವ ಹುಣಸೆ ಹಾಗೂ ಗೊಬ್ಬಳಿ ಮರಗಳನ್ನು ಕಡಿದು ತುಂಡರಿಸಿ ತಂದು ಗುಡಿ ಆವರಣದಲ್ಲಿ ಜೋಡಿಸಿದರು. ವಿವಿಧ ಪೂಜೆ ಸಲ್ಲಿಸಿ ಕೊಂಡೋತ್ಸವಕ್ಕೆ ಸಿದ್ಧಪಡಿಸಿದರು.


ನಂತರ ಸೋಮವಾರ ಸಂಜೆ ದೇವರು ಉತ್ಸವಮೂರ್ತಿಯೊಂದಿಗೆ ಗ್ರಾಮದ ಹೊರ ವಲಯದಲ್ಲಿರುವ ಕೆರೆ ಬಳಿಗೆ ಕರೆತಂದು ಅರ್ಚಕರು ಮೂಲಕ ಪೂಜೆ ಸಲ್ಲಿಸಿ, ಹೂ ಹೊಂಬಾಳೆಯೊಂದಿಗೆ ತಮಟೆ, ನಗಾರಿ, ಮಂಗಳವಾದ್ಯದೊಡನೆ ಮೆರವಣಿಗೆಯ ಮೂಲಕ ದೇವಸ್ಥಾನದ ಬಳಿಗೆ ಬರಲಾಯಿತು. ಈ ವೇಳೆ ಪೂಜೆ ಸಲ್ಲಿಸಿ ಕೊಂಡೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಆರ್ಚಕರು ಕೊಂಡ ಹಾಯ್ದರು. ನಂತರ ಸುತ್ತಮುತ್ತಲ್ಲಿನ ಗ್ರಾಮಗಳಾದ ಕೆ.ದೇವರಹಳ್ಳಿ, ಮಸಣಾಪುರ, ಚಾಟೀಪುರ, ಹೊಂಗನೂರು, ದಾಸನಹುಂಡಿ, ಗಂಗವಾಡಿ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತಾರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.


ಆಯುಧಗಳಿಂದ ಹೊಡೆದುಕೊಂಡರು: ಗ್ರಾಮದ ಕ್ಯಾತ ದೇವರ ಸ್ವಾಮಿ ಕೊಂಡೋತ್ಸವ ನಿಮಿತ್ತ ದೇಗುಲದ ಪೂಜಾರಿಯು ಸೇರಿದಂತೆ ಭಕ್ತರ ಮಚ್ಚಿನಿಂದ ಹೊಟ್ಟೆಯ ಭಾಗಕ್ಕೆ ಹೊಡೆದುಕೊಳ್ಳುತ್ತಿದ್ದರು. ಇದರಿಂದ ಅವರಿಗೆ ಯಾವುದೇ ತಹದ ನೋವು ಮತ್ತು ಗಾಯಗಳಾಗಲಿ ಕಂಡು ಬರಲಿಲ್ಲ. ಇದನ್ನು ಕಂಡ ಭಕ್ತರು ಆಶ್ವರ್ಯಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net