ಮುಂಜಾಗ್ರತೆಯಿಂದ ಏಡ್ಸ್ ನಿಯಂತ್ರಣ ಸಾಧ್ಯ

5mnv01
Published on

ಮಾನ್ವಿ: ಏಡ್ಸ್ ಬಂದಾಗ ಅದರ ಬಗ್ಗೆ ಭಯಪಡದೆ ವೈದ್ಯರ ಸಲಹೆಯಂತೆ ಸಮಯಕ್ಕೆ ಸರಿಯಾಗಿ ಔಷಧ ತೆಗೆದುಕೊಳ್ಳಬೇಕು ಎಂದು ಡಾ.ಶ್ರೀಧರ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಏಡ್ಸ್ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಏಡ್ಸ್ ನಾಲ್ಕು ವಿಧಾನಗಳ ಮೂಲಕ ಹರಡುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆ, ಎಚ್‌ಐವಿ ಸೋಂಕಿತರಿಂದ ರಕ್ತ ಪಡೆಯುವುದು, ಸೋಂಕಿತ ತಾಯಿಯಿಂದ ಮಗುವಿಗೆ, ಅಸುರಕ್ಷಿತವಾಗಿ ಸೂಜಿ ಮತ್ತು ಸೀರಿಂಜ್ ಬಳಸುವುದರಿಂದ ಕಾಯಿಲೆ ಹರಡುತ್ತದೆ. ಮುಂಜಾಗ್ರತೆ ವಹಿಸುವುದರಿಂದ ಕಾಯಿಲೆ ಹರಡದಂತೆ ತಡೆಯಲು ಸಾಧ್ಯ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಬಸ್ಸಯ್ಯ ಎಚ್‌ಐವಿ ಕಾಯಿಲೆ ಬಗ್ಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net