

ಚಿತ್ರದುರ್ಗ: ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ಬೀಮಾ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಹೆಸರು(ಮಳೆ ಆಶ್ರೀತ),ಈರುಳ್ಳಿ(ನೀರಾವರಿ)ಬೆಳೆ ವಿಮಾ ನೋಂದಣಿಗೆ ಜುಲೈ 15 ಕೊನೆಯ ದಿನ. ಮುಸುಕಿನ ಜೋಳ (ನೀರಾ ವರಿ)(ಮಳೆಯಾಶ್ರೀತ),ಜೋಳ(ನೀರಾವರಿ)(ಮಳೆಯಾಶ್ರೀತ),ಸಜ್ಜೆ(ಮಳೆಯಾಶ್ರೀತ),ಸಾವೆ(ಮಳೆಯಾಶ್ರೀತ),ತೊಗರಿ(ಮಳೆಯಾ ಶ್ರೀತ),ಹುರುಳಿ(ಮಳೆಯಾಶ್ರೀತ),ಸೂರ್ಯಕಾಂತಿ(ನೀರಾವರಿ)(ಮಳೆಯಾಶ್ರೀತ),ಎಳ್ಳು(ಮಳೆಯಾಶ್ರೀತ),ನೆಲಗಡಲೆ(ಶೇಂಗಾ)(ನೀ ರಾವರಿ)(ಮಳೆಯಾಶ್ರೀತ),ಹತ್ತಿ(ನೀರಾವರಿ)(ಮಳೆಯಾಶ್ರೀತ),ಟೊಮೆಟೊ,ಈರುಳ್ಳಿ(ಮಳೆಯಾಶ್ರೀತ),ಕೆಂಪು ಮೆಣಸಿನಕಾಯಿ (ಮ ಳೆಯಾಶ್ರೀತ)ಬೆಳೆಗಳ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ. ಭತ್ತ (ನೀರಾವರಿ),ರಾಗಿ(ನೀರಾವರಿ)(ಮಳೆಯಾಶ್ರೀ ತ),ನವಣೆ(ಮಳೆಯಾಶ್ರೀತ)ನೊಂದಣಿಗೆ ಆಗಸ್ಟ್ 16 ಕೊನೆಯ ದಿನವಾಗಿದೆ.
ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು. ಬೆಳೆ ಸಾಲ ಪಡೆದ ರೈತರು ಯೋಜನೆಯಲ್ಲಿ ಭಾಗವಹಿಸಲು ಬಯಸಿದಿದ್ದರೆ ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮೊ ದಲು ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿದರೆ ಅಂತಹ ರೈತರನ್ನು ವಿಮೆ ಯೋಜನೆಯಿಂದ ಕೈಬಿಡಲಾಗುವುದು.
ಆರ್ಥಿಕ ಸಂಸ್ಥೆಗಳು,ಬ್ಯಾಂಕ್,ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ರೈತರನ್ನು ಬೆಳೆ ವಿಮೆಗೆ ನೋಂದಾಯಿಸಿದಾಗ ಬೆಳೆ ವಿಮೆ ಪ್ರಸ್ತಾವ ನೆಯನ್ನು ಹಾಗೂ ವಿಮಾ ಕಂತನ್ನು ನಿಗದಿತ ಸಮಯದೊಳಗೆ ನಿಯಮಾನುಸಾರ ಅನುಷ್ಠಾನ ವಿಮಾ ಸಂಸ್ಥೆಗೆ ವರ್ಗಾಯಿಸ ಬೇಕು. ನೋಂದಣಿ ಪ್ರಕ್ರಿಯೆ ಹಂತದಲ್ಲಿ ನಿರ್ಲಕ್ಷದಿಂದ ಲೋಪವಾದರೆ,ಅದರಿಂದಾಗುವ ಬೆಳೆ ವಿಮೆ ಪರಿಹಾರ ವ್ಯಾಜ್ಯಗಳಿಗೆ ಸಂಬಂಧಿಸಿದ ಈ ಸಂಸ್ಥೆಗಳನ್ನೇ ನೇರ ಹೊಣೆ ಮಾಡಲಾಗುತ್ತದೆ.
ರೈತರು ಬ್ಯಾಂಕ್,ಸಾರ್ವಜನಿಕ ಸೇವಾ ಕೇಂದ್ರಗಳಲ್ಲೂ ನೋಂದಣಿ ಮಾಡಬಹುದು. ಚಿತ್ರದುರ್ಗ ಜಿಲ್ಲೆಗೆ ಅಗ್ರಿಕಲ್ಚರ್ ಇನ್ಶೂ ರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಅನುಷ್ಠಾನ ಸಂಸ್ಥೆಯಾಗಿರುತ್ತದೆ. ನೋಂದಣಿಗೆ ಫ್ರೂಟ್ಸ್ ಐಡಿ ಕಡ್ಡಾಯವೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಹೇಳಿಕೆಯಲ್ಲಿ ತಿಳಿಸಿದಾರೆ.