ಮುಂಗಾರು ಬಿತ್ತನೆಗೆ ಕಲಬುರಗಿ ಸಜ್ಜು

sow seeding
Published on

ಜಯತೀರ್ಥ ಪಾಟೀಲ ಕಲಬುರಗಿ: ಕರೊನಾ ಕಾರ್ಮೋಡದ ಮಧ್ಯೆಯೂ ಕೃಷಿ ಚಟುವಟಿಕೆಗೆ ತೊಂದರೆ ಆಗದಂತೆ ಕೃಷಿ ಇಲಾಖೆ ಭರದ ಸಿದ್ಧತೆ ಆರಂಭಿಸಿದೆ. ಜೂನ್ನಲ್ಲಿ ಬಿತ್ತನೆ ಕಾರ್ಯ ಶುರುವಾಗುವುದರಿಂದ ಬೀಜ, ರಸಗೊಬ್ಬರ, ಪರಿಕರ ವಿತರಣೆ ಸೇರಿ ಯಾವುದಕ್ಕೂ ಕೊರತೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಕರೊನಾ ಭೀತಿ ಮಧ್ಯೆಯೂ ರೈತ ತನ್ನ ಕಾಯಕಕ್ಕೆ ಅಣಿಯಾಗುತ್ತಿದ್ದಾನೆ.
ಮಾರ್ಚ್​ , ಏಪ್ರಿಲ್ ನಲ್ಲಿ ಜಿಲ್ಲೆಯ ಹಲವೆಡೆ ಮಳೆ ಸುರಿದಿದ್ದು, ಇದನ್ನು ಆಧರಿಸಿ ರೈತಾಪಿ ವರ್ಗ ಭೂಮಿ ಹದ ಮಾಡುವುದರ ಜತೆಗೆ ಅಗತ್ಯ ಬೀಜ, ಪರಿಕರ, ಗೊಬ್ಬರ ಖರೀದಿಸುವಲ್ಲಿ ತೊಡಗಿಸಿಕೊಂಡಿದೆ. ಜೂನ್ ಮೊದಲ ಅಥವಾ ಎರಡನೇ ವಾರ ಮಳೆ ಬೀಳುತ್ತಿದ್ದಂತೆ ಬಿತ್ತನೆ ಚಟುವಟಿಕೆ ಚುರುಕುಗೊಳ್ಳಲಿದೆ.
ಜಿಲ್ಲೆಯಲ್ಲಿ ಒಟ್ಟು ಬಿತ್ತನೆ ಕ್ಷೇತ್ರ 10,40,570 ಹೆಕ್ಟೇರ್ ಇದ್ದರೆ, 3,95,497 ಹಿಡುವಳಿದಾರರಿದ್ದಾರೆ. 1,19,326 ಹೆಕ್ಟೇರ್ ನೀರಾವರಿ ಪ್ರದೇಶವಿದೆ. 32 ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ, ಗೊಬ್ಬರ ಪೂರೈಸಲಾಗುತ್ತಿದೆ. ಆದರೆ ಈ ಬಾರಿ ಪ್ರತಿ ಹೋಬಳಿಯ 4-5 ಹಳ್ಳಿಗಳಲ್ಲಿ ಬೀಜ ಖರೀದಿಗೆ ಅವಕಾಶ ಮಾಡಿಕೊಡಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ವ್ಯವಸ್ಥೆಗೆ ಮುಂದಾಗಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲು ನಿರ್ಧರಿಸಲಾಗಿದೆ.
ರೈತರ ಸಂಪರ್ಕ ಕೇಂದ್ರಗಳಲ್ಲಿ ಕೋವಿಡ್-19 ಜಾಗೃತಿ ಮೂಡಿಸುವ ಫ್ಲೆಕ್ಸ್ ಅಳವಡಿಸಲಾಗುತ್ತಿದೆ. ಜತೆಗೆ ಮೈಕ್ ಸಿಸ್ಟಂ ಮೂಲಕ ತಿಳಿವಳಿಕೆ ಮೂಡಿಸಲು ಯೋಜಿಸಲಾಗಿದೆ. ಸೋಡಿಯಂ ಹೈಡ್ರೋಕ್ಲೋರೈಡ್ ಸಿಂಪಡಣೆ ಮೂಲಕ ಅಗತ್ಯ ಮುಂಜಾಗ್ರತೆ ಕೈಗೊಳ್ಳಲು ನಿರ್ಧರಿಸಲಾಗಿದೆ.

  • ಮುಂಗಾರು ಬಿತ್ತನೆ ಗುರಿ
    ಅಫಜಲಪುರ 99850 ಹೆಕ್ಟೇರ್
    ಆಳಂದ 131131 ,,
    ಚಿಂಚೋಳಿ 99767
    ಚಿತ್ತಾಪುರ 120510
    ಕಲಬುರಗಿ 99671
    ಜೇವಗರ್ಿ 118271
    ಸೇಡಂ 85930
    ಒಟ್ಟು 755130
  • ಮಳೆ ವಿವರ
    ಜಿಲ್ಲೆಯಲ್ಲಿ ಮಾಚರ್್ನಲ್ಲಿ ಸಾಮಾನ್ಯ ಮಳೆ 7 ಮಿ.ಮೀ ಇದ್ದರೆ, 12 ಮಿ.ಮೀ ಮಳೆಯಾಗಿದೆ. ಏಪ್ರಿಲ್ನಲ್ಲಿ ಸರಾಸರಿ 19 ಮಿ.ಮೀ ಇದ್ದರೆ, 22 ಮಿ.ಮೀ ಮಳೆ ಬಿದ್ದಿದೆ. ಜನವರಿಯಿಂದ ಏಪ್ರಿಲ್ ಕೊನೆಯವರೆಗೆ ಸಾಮಾನ್ಯ ಮಳೆ 34 ಮಿ.ಮೀ ಇದ್ದರೆ, 36 ಮಿ.ಮೀ ಮಳೆ ಸುರಿದಿದೆ.
  • ಮಳೆಗೆ ವ್ಯಾಪಕ ಬೆಳೆ ಹಾನಿ
    ಎರಡು ಎಕರೆಗಿಂತ ಕಡಿಮೆ ಹಿಡುವಳಿ ಇರುವ ಯಡ್ರಾಮಿ, ನಾಲವಾರದಲ್ಲಿ 81.17 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 10.97 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. 2 ಹೆಕ್ಟೇರ್ಗಿಂತ ಹೆಚ್ಚಿನ ಹಿಡುವಳಿಯಲ್ಲಿ 49.33 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 6.66 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಒಟ್ಟು ನೀರಾವರಿ ಪ್ರದೇಶದ 130.50 ಹೆಕ್ಟೇರ್ ಬೆಳೆ ಹಾನಿ, 17.62 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ.
  • ಕೃಷಿ ಉಪಕರಣ ರಿಪೇರಿ ಕೇಂದ್ರ
    ಅಫಜಲಪುರ 4
    ಆಳಂದ 5
    ಚಿಂಚೋಳಿ 4
    ಚಿತ್ತಾಪುರ 2
    ಕಲಬುರಗಿ 22
    ಜೇವಗರ್ಿ 5
    ಸೇಡಂ 3
    ಒಟ್ಟು 45
  • ಬಿತ್ತನೆ ಬೀಜ ಬೇಡಿಕೆ (ಕ್ವಿಂ) ಲಭ್ಯತೆ (ಕ್ವಿಂ)
    ಭತ್ತ 460 100
    ಮೆಕ್ಕೆಜೋಳ 360 100
    ಶೇಂಗಾ 350 25
    ತೊಗರಿ 10,280 6000
    ಹೆಸರು 1210 500
    ಉದ್ದು 815 300
    ಸೂರ್ಯಕಾಂತಿ 388 100
    ಜೋಳ 46 50
    ಸಜ್ಜೆ 114 50
    ಒಟ್ಟು 24893 7725
  • ರಸಗೊಬ್ಬರ ಬೇಡಿಕೆ (ಮೆ.ಟನ್) ಲಭ್ಯತೆ
    ಡಿಎಪಿ 26800 11586
    ಯೂರಿಯಾ 19650 3947
    ಕಾಂಪ್ಲೆಕ್ಸ್ 18200 1324
    ಎಂಒಪಿ 3597 637
    ಎಸ್ಎಸ್ಪಿ 4250 512
    ಒಟ್ಟು 72497 18006

ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ಗೊಬ್ಬರ ಸೇರಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದು, ಯಾವೊಬ್ಬ ರೈತರಿಗೂ ತೊಂದರೆ ಆಗದಂತೆ ಅಗತ್ಯ ಸೌಲಭ್ಯ ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಬಾರಿ ವಿನೂತನ ಮಾದರಿಯಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಕೋವಿಡ್-19 ಜಾಗೃತಿ ಕಾರ್ಯಕ್ರಮವೂ ನಡೆಯಲಿದೆ.
| ಡಾ.ರಿತೇಂದ್ರನಾಥ ಸೂಗೂರ
ಜಂಟಿ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net