ಮೀಸಲು ಪಡೆದವರು ಮಾತನಾಡಲ್ಲ

RAJ RATAN AMBEDAKAR PHOTO (1)
Published on

ಕಲಬುರಗಿ: ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದAತೆ ರಾಜಕೀಯ ಮೀಸಲು ಪಡೆದು, ಅಧಿಕಾರದಲ್ಲಿರುವ ದಲಿತ ಜನಪ್ರತಿನಿಧಿಗಳು ದಲಿತರು, ಶೋಷಿತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಂಬೇಡ್ಕರ್ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್ ಬೇಸರ ವ್ಯಕ್ತಪಡಿಸಿದರು.
ನಗರದ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ಭಾನುವಾರ ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘಟನೆ (ಎಎಸ್‌ಎ) ಆಯೋಜಿಸಿದ್ದ ಸಾಮಾಜಿಕ ಪರಿವರ್ತನಾ ಚಳವಳಿಯಲ್ಲಿ ನೌಕರರ ಮತ್ತು ವಿದ್ಯಾರ್ಥಿಗಳ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಒಲ್ಲದ ಮನಸ್ಸಿನಿಂದ ಗಾಂಧೀಜಿ ಒತ್ತಡಕ್ಕೆ ಮಣಿದು ಪೂನಾ ಒಪ್ಪಂದಕ್ಕೆ ಸಹಿ ಹಾಕಿದರು. ಇದರಿಂದ ಪ್ರತ್ಯೇಕ ಮತದಾನದ ಬದಲು ಎಸ್ಸಿ, ಎಸ್ಟಿ ಮೀಸಲು ಕ್ಷೇತ್ರಗಳು ದೊರೆತವು. ಆದರೆ ಮೀಸಲು ಕ್ಷೇತ್ರದಿಂದ ಆಯ್ಕೆಯಾದವರು ಬ್ರಾಹ್ಮಣರ ಹಿಡಿತದಲ್ಲಿ ಇರುವ ಪಕ್ಷಗಳ ವರಿಷ್ಠರ ತಾಳಕ್ಕೆ ಕುಣಿಯುತ್ತಿದ್ದಾರೆ. ದಲಿತರ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವವರಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಹೋರಾಟದ ಆಶಯದಂತೆ ಪ್ರತ್ಯೇಕ ಮತದಾನದ ಪದ್ಧತಿಗೆ ಜಾರಿಗೆ ತಂದಿದ್ದಲ್ಲಿ ಹಿಂದೂ ಧರ್ಮ, ಮೇಲ್ಜಾತಿ, ಸರ್ಕಾರದ ಮೇಲೆ ಅವಲಂಬನೆ ಆಗುತ್ತಿರಲಿಲ್ಲ. ಜಾತಿ ವ್ಯವಸ್ಥೆಯಿಂದ ಅಂತರ ಕಾಯ್ದುಕೊಂಡ ಎಸ್‌ಸಿ ಮತ್ತು ಎಸ್‌ಟಿಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಪೂನಾ ಒಪ್ಪಂದ ವಾಸ್ತವ ಅರಿಯಬೇಕು ಎಂದರು.
ಕೇAದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಮುಚ್ಚುತ್ತೇವೆ ಎಂದಿದ್ದಾರೆ. ಅದು ಸತ್ಯವಾದರೆ ಎರಡು ವರ್ಷದಲ್ಲಿ ಸರ್ಕಾರಿ ನೌಕರಿ ಕಡಿತವಾಗಲಿವೆ. ಉಚಿತ ಶಿಕ್ಷಣ ಕೊನೆ ಆಗಲಿದೆ. ಎಲ್ಲರನ್ನು ಮತ್ತೊಮ್ಮೆ ಗುಲಾಮಗಿರಿಗೆ ಕರೆದೊಯ್ಯಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಪ್ಪಗೆರೆ ಸೋಮಶೇಖರ ಮಾತನಾಡಿ, ರಾಜ್ಯದ ವಿಶ್ವವಿದ್ಯಾಲಯಗಳ ಎಲ್ಲ ವಿಭಾಗಗಳಲ್ಲಿ ಲಕ್ಷಾಂತರ ರೂ. ಸಂಬಳ ಪಡೆಯುವ ದಲಿತ ಪ್ರಾಧ್ಯಾಪಕರಿದ್ದು, ಸಾಮಾಜಿಕ ಹೊಣೆಗಾರಿಕೆ ಇಲ್ಲದೆ ಬದುಕುತ್ತಿದ್ದಾರೆ. ದಲಿತ ಪ್ರಾಧ್ಯಾಪಕರು ಕುಟುಂಬಕ್ಕೆ ಸೀಮಿತರಾಗಿದ್ದಾರೆ. ಅಂಬೇಡ್ಕರ್ ಸುರಿಸಿದ ಕಣ್ಣೀರಿನ ಕಥೆಗಳು ಗೊತ್ತಿಲ್ಲ. ಆಂತರಿಕ ಅಹಂಕಾರ ನಾಶ ಮಾಡುತ್ತಿದೆ. ಸರ್ಕಾರದ ಅನೇಕ ಇಲಾಖೆಗಳಲ್ಲಿನ ದಲಿತ ನೌಕರರಲ್ಲಿಯೂ ಇದೆ ಸಮಸ್ಯೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಪಶುಸಂಗೋಪನಾ ಇಲಾಖೆಯ ಮುಖ್ಯ ವೈದ್ಯಾಧಿಕಾರಿ (ಆಡಳಿತ) ಡಾ.ಯಲ್ಲಪ್ಪ ಎಸ್.ಇಂಗಳೆ, ಎಎಸ್‌ಎ ಮಾರ್ಗದರ್ಶಕ ಚಂದ್ರಶೇಖರ ಏಕಲೂರೆ, ಎನ್‌ಒಎಚ್‌ಪಿ ಜಿ¯್ಲÁ ನೋಡಲ್ ಅಧಿಕಾರಿ ಸಂಧ್ಯಾ ಎಸ್.ಕಾನೇಕರ, ಸಿಪಿಐ ರಮೇಶ ವೈ. ಕಾಂಬಳೆ, ಸಂಘಟನೆಯ ಪಂಡಿತ ಮದಗುಣಕಿ, ಅನಿಲ್ ಟೆಂಗಳಿ, ಪರಶುರಾಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net