ಮೀಸಲಾತಿಗಾಗಿ ರಾಜೀನಾಮೆಗೆ ಒತ್ತಡ ಹೇರುವುದು ಸರಿಯಲ್ಲ: ಸಚಿವ‌ ಬಿ.ಸಿ. ಪಾಟೀಲ

hn-21-1
Published on

ವಿಜಯಪುರ: ಮೀಸಲಾತಿಗಾಗಿ ರಾಜೀನಾಮೆಗೆ ಒತ್ತಡ ಹೇರುವುದು ಸರಿಯಲ್ಲ ಎಂದು ಸಚಿವ‌ ಬಿ.ಸಿ. ಪಾಟೀಲ ಹೇಳಿದರು.

ಪಂಚಮಸಾಲಿ ಹೋರಾಟದ ಸಮಾವೇಶದಲ್ಲಿ 2 ಎ ಮೀಸಲಾತಿ ಸಿಗದಿದ್ದರೆ ಸಚಿವರು ರಾಜೀನಾಮೆ ನೀಡಬೇಕೆಂಬ ಯತ್ನಾಳರ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಸೋಮವಾರ ಇಟ್ಟಂಗಿಹಾಳ ಬಳಿಯ ಫುಡ್ ಪಾರ್ಕ್ ನಿರ್ಮಾಣ ಜಾಗೆ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹೋರಾಟದಲ್ಲಿ ಎಲ್ಲ ಸಮುದಾಯದ ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ. ಮೀಸಲಾತಿ ಸಿಗದಿದ್ದರೆ ಸಚಿವ ಸ್ಥಾನ, ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಡ ಹಾಕುವುದು ಸರಿಯಲ್ಲ. ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ನಿಲುವುಗಳಿರುತ್ತವೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಹೈಕಮಾಂಡ ದೆಹಲಿಗೆ ಕರೆಸಿಕೊಂಡಿರುವ ವಿಚಾರ ನನಗೆ ತಿಳಿದಿಲ್ಲ. ನಿನ್ನೆ ನಾನು ಬೀದರ್, ಕಲಬುರರ್ಗ ಜಿಲ್ಲೆಯ ಪ್ರವಾಸದಲ್ಲಿದ್ದೆ. ಹೀಗಾಗಿ ಯತ್ನಾಳ ಅವರನ್ನು ಹೈಕಮಾಂಡ ದೆಹಲಿಗೆ ಕರೆಸಿಕೊಂಡಿರುವ ವಿಷಯ ನನಗೆ ತಿಳಿದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net