ಮೀಸಲಾತಿ ಹೋರಾಟಕ್ಕೆ ಸನ್ನದ್ಧರಾಗಿ : ಜಯ ಶ್ರೀನಿವಾಸನ್ ಸ್ವಾಮೀಜಿ ಕರೆ

1 bgp news photo
Published on

ಬಾಗೇಪಲ್ಲಿ : ಉದ್ಯೋಗ ಮತ್ತು ರಾಜಕೀಯದಲ್ಲಿ 2ಎ ಮೀಸಲಾತಿ ಜಾರಿಗಾಗಿ ಬಲಿಜ ಸಮುದಾಯದವರು ಹೋರಾಟಕ್ಕೆ ಸನ್ನದ್ಧರಾಗಬೇಕಾಗಿದೆ ಎಂದು ಅಖಿಲ ಭಾರತ ಬಲಿಜ ಮಹಾಸಂಸ್ಥಾನ ಮಠದ ಅಧ್ಯಕ್ಷ ಎಂದು ಶ್ರೀ ಜಯ ಶ್ರೀನಿವಾಸನ್ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ಕೊಂಡಂವಾರಪಲ್ಲಿ ಎಸ್‌ಎಲ್‌ಎನ್ ಕಲ್ಯಾಣ ಮಂಟಪದಲ್ಲಿ ಶ್ರೀಯೋಗಿ ಅಮರನಾರಾಯಣ ಬಲಿಜ ಸಂದ ವತಿಯಿಂದ ಸೋಮವಾರ ಆಯೋಜಿಸಿದ್ದ ಮೀಸಲಾತಿ ಹೋರಾಟ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕೈವಾರ ತಾತಯ್ಯ, ವಿಜಯನಗರ ಸಾವ್ರಾಜ್ಯದ ಚಕ್ರವರ್ತಿ ಶ್ರೀಕೃಷ್ಣದೇವರಾಯ, ಅಕ್ಷರವಾತೆ ಸಾವಿತ್ರಿ ಬಾಯಿುಲೆ ವಂಶಜರಾದ ಬಲಿಜ ಸಮುದಾಯ ಇಡೀ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಆದರೆ, ಸಮುದಾಯ ಮೀಸಲಾತಿಯಿಂದ ವಂಚನೆಗೊಂಡು ಉದ್ಯೋಗವಕಾಶ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಹಕ್ಕುಗಳನ್ನು ಪಡೆಯುವ ಉದ್ದೇಶದಿಂದ ಸಮುದಾಯದ ಜನರು ಸಂಘಟಿತರಾಗಿ ರಾಜ್ಯ ಸರ್ಕಾರಕ್ಕೆ ಹಕ್ಕೋತ್ತಾಯವನ್ನು ಮಂಡಿಸಬೇಕಾಗಿದೆ ಎಂದರು.ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಸಮುದಾಯಕ್ಕೆ ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2ಎ ಮೀಸಲಾತಿ ಶಿಕ್ಷಣಕ್ಕೆ ವಾತ್ರ ನೀಡಿದ್ದರು. ಈ ಮೀಸಲಾತಿ ಉದ್ಯೋಗ ಕ್ಷೇತ್ರಕ್ಕೂ ಜಾರಿಯಾಗಬೇಕು ಎಂದು ವಕೀಲ ಎ.ಜಿ. ಸುಧಾಕರ್ ಒತ್ತಾಯಿಸಿದರು.

ಮುಖಂಡರಾದ ಜಿನ್ನಿ, ವಕೀಲ ಅನೀಲ್ ಕುವಾರ್, ಜಿ.ವಿ.ಕೃಷ್ಣಯ್ಯ, ಗೋಪಾಲಕೃಷ್ಣ, ಸುಕನ್ಯಾ, ಗುಡಿಬಂಡೆ ಜಿ.ಎನ್.ಎಸ್.ನಾಯ್ಡು, ನಾರಾಯಣಸ್ವಾಮಿ, ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net