

ಚಿಕ್ಕೋಡಿ: ಲಿಂಗಾಯತ ಪಂಚಮಸಾಲಿ ಸಮುದಾಯದವರು ಮೀಸಲಾತಿ ಹೋರಾಟ ನಿಲ್ಲಿಸಿದ್ದಾರೆಂದು ಕೆಲವರು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಮೀಸಲಾತಿ ಹೋರಾಟವನ್ನು ನಾವು ಕೈಬಿಡುವುದಿಲ್ಲ ಎಂದು ಕೊಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ರಾಜ್ಯಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ಸೆ.20ರಂದು ಹಾರೂಗೇರಿಯಿಂದ ಪಂಚಮಸಾಲಿ ಪ್ರತಿಾಕ್ರಾಂತಿ ರ್ಯಾಲಿ ಮತ್ತು ಹೋರಾಟ ಪುನರಾಂಭಿಸಲಾಗುವುದು. ಸೆ.29ರಂದು ಹಾರೂಗೇರಿಯಲ್ಲಿ ಸಮಾವೇಶ ನಡೆಸುವ ಮೂಲಕ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲಾಗುವುದು ಎಂದರು.
ಲಿಂಗಾಯತ ಪಂಚಮಸಾಲಿ ಎಂದೇ ಬರೆಸಿ: ಸೆ.22ರಿಂದ ನಡೆಸಲಾಗುವ ಜಾತಿಗಣತಿ ಸಮೀಕ್ಷೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದವರು ಜಾತಿ ಕಾಲಂದಲ್ಲಿ ಎ&0868 ಎಂಬ ಕೋಡ್ ಬರೆಯಿಸಿ ಮುಂದೆ ಲಿಂಗಾಯತ ಪಂಚಮಸಾಲಿ ಎಂದು ಬರೆಯಿಸಬೇಕು ಎಂದು ಸರ್ವಾನುಮತದಿಂದ ರ್ನಿಣಯ ತೆಗೆದುಕೊಳ್ಳಲಾಗಿದೆ. ಸೆ.17ರಂದು ಹುಬ್ಬಳ್ಳಿಯಲ್ಲಿ ಮತ್ತು ಸೆ.21ರಂದು ಬೆಳಗಾವಿಯಲ್ಲಿ ನಡೆಯುವ ಜನಪ್ರತಿನಿಧಿಗಳು ಮತ್ತು ಮುಖಂಡರ ಸಭೆಯಲ್ಲಿ ಇದನ್ನು ಅಂಗೀಕರಿಸಲಾಗುವುದು. ಜಾತಿಗಣತಿ ಕುರಿತು ಸಮುದಾಯದ ಜನರಲ್ಲಿ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುವುದು ಎಂದರು.
ಗುಂಡು ಪಾಟೀಲ, ಚಿದಾನಂದ ಕವಲಿ, ರಮೇಶ ಹಿತ್ತಲಮನಿ, ಸುಧಾಕರ ಪಾಟೀಲ, ಎಂ.ಎಸ್.ಈಟಿ, ಎಸ್.ಬಿ.ಪಾರಶೆಟ್ಟಿ, ಅಶೋಕ ಪರಗಾಪುರೆ, ವೀರನಗೌಡ ಪಾಟೀಲ, ಎಚ್.ಸಿ.ಸಿದ್ದನಗೌಡ, ಶಂಕರಗೌಡ ನಾಗನಗೌಡರ ಇತರರಿದ್ದರು.