ಮೀಸಲಾತಿ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಿ

08 kem 2
Published on

ಕೆಂಭಾವಿ: ಒಳ ಮೀಸಲಾತಿ ಸಮೀಕ್ಷಾ ಕಾರ್ಯ ಮನೆ ಮನೆಗೆ ತೆರಳಿ ಜನರಿಂದ ಮಾಹಿತಿ ಪಡೆದು ಸರಿಯಾಗಿ ಮಾಡುವಂತೆ ತಾಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶಿಷ್ಠ ಜಾತಿ ಒಳ ಮೀಸಲಾತಿ ಸಮೀಕ್ಷಾ ಕಾರ್ಯ ನಡೆಯುತ್ತಿರುವ ಹಲವು ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಪಶೀಲಿಸಿ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಪ್ರತಿ ನಗರ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಸಮೀಕ್ಷಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಭರ್ತಿ ಮಾಡುವ ಫಾರಂನಲ್ಲಿರುವAತೆ ಎಲ್ಲ ವಿಷಯ ಸ್ಪಷ್ಟವಾಗಿ ತಿಳೀದು ಜನರಿಂದ ಮಾಹಿತಿ ಸಂಗ್ರಹಿಸಿ ಯಾವುದೇ ಲೋಪವಾಗದಂತೆ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಮೀಕ್ಷಾ ಅಧಿಕಾರಿಗಳ ತಂಡ ತಮ್ಮ ತಮ್ಮ ಮನೆಗೆ ಬಂದಾಗ ಜನತೆ ಅವರಿಗೆ ಸಹಕರಿಸಿ ಸಮಗ್ರ ಮಾಹಿತಿ ನೀಡುವಂತೆ ಮನವಿ ಮಾಡಿದರು. ಯಾಳಗಿ, ಯಾಳಗಿ ತಾಂಡಾ ಸೇರಿ ಹಲವು ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷಾ ವೀಕ್ಷಣೆ ಮಾಡಿದರು. ತಾಪಂ ತಾಂತ್ರಿಕ ಸಂಯೋಜಕ ಶಿವಯೋಗಿ ಹಿರೇಮಠ, ಪಿಡಿಒ ಜಯಾಚಾರ್ಯ ಪುರೋಹಿತ, ಶಿಕ್ಷಕರಾದ ಕವಿತಾ, ಶ್ವೇತಾ ಜೊತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net