ಮೀಸಲಾತಿ ವಜಾ ಸಲ್ಲದು

27kglphoto2...,,.,,,
ಮುಸ್ಲಿಂ ಜನಾಂಗದ ಮೀಸಲಾತಿ ವಜಾವಿರೋಧಿಸಿ ಕೊಳ್ಳೇಗಾಲದಲ್ಲಿ ಎಸ್‌ಡಿಪಿಐ ಕಾಯಕರ್ತರು ಹೆದ್ದಾರಿ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಮುಖಂಡರಾದ ರಿಜ್ವಾನ್, ಜುನೈದ್ ಉಲ್ಲಾ, ಜಾಕೀರ್, ಇಮ್ರಾನ್ ಮತ್ತಿತರಿದ್ದರು.
Published on

ಕೊಳ್ಳೇಗಾಲ: ಕ್ಯಾಟಗರಿ 2ಬಿ ಅಡಿಯಲ್ಲಿ ನೀಡಲಾಗಿದ್ದ ಮುಸ್ಲಿಂ ಜನಾಂಗದ ಮೀಸಲಾತಿ ವಜಾಗೊಳಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಸೋಮವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಮಸೀದಿ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಮೊಳಗಿಸಿದರು. ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತೆರಳಿ ಶಿರೆಸ್ತೇದಾರ್‌ಗೆ 2ಬಿ ಮೀಸಲಾತಿ ಮರುಸ್ಥಾಪನೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು. ಎಸ್‌ಡಿಪಿಐ ತಾಲೂಕು ಅಧ್ಯಕ್ಷ ರಿಜ್ವಾನ್ ಹಾಗೂ ಜುನೈದ್ ಉಲ್ಲಾ, ಜಾಕೀರ್, ಇಮ್ರಾನ್, ಆರೀಫ್, ಜಕಾವುಲ್ಲಾ, ಇರ್ಫಾನ್, ನಗರಸಭೆ ಸದಸ್ಯ ಜಯಮೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net