ಮೀನು ಹಿಡಿಯಲು ಹೋಗಿದ್ದವ ಮುಳುಗಿ ಸಾವು

Published on

ಮಧುಗಿರಿ: ತಾಲೂಕಿನ ಸಿಂಗನಹಳ್ಳಿ ಗುಟ್ಟೆಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಗುಂಡಿಯಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸಿಂಗನ ಹಳ್ಳಿಯ ಆಟೋ ಚಾಲಕ ರಂಗನಾಥ್​(40)ಮೃತ. ಶನಿವಾರ ಮಗ ಧನುಷ್​ ಜತೆ ರಂಗನಾಥ್​ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ರಂಗನಾಥ್​ ಆಳದ ಗುಂಡಿಯಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಧನುಷ್​ ರಕ್ಷಣೆಗೆ ಕೂಗಿಕೊಂಡಿದ್ದು, ಅಕ್ಕಪಕ್ಕದವರು ರಕ್ಷಣೆಗೆ ಬರುವ ವೇಳೆಗಾಗಲೇ ರಂಗನಾಥ್​ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳ ಶೋಧ ನಡೆಸಿ ಮೃತ ದೇಹ ಹೊರತೆಗೆದರು.

ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಪತ್ನಿ ರಮ್ಯಾ ನೀಡಿದ ದೂರಿನ ಮೇರೆಗೆ ಕೊಡಿಗೇನ ಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net