ಮೀನು ವ್ಯಾಪಾರಸ್ಥರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

ಮೀನು ವ್ಯಾಪಾರಸ್ಥರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ
Published on

ಹಾಸನ: ಕಾಯಿಲೆ ನಿಯಂತ್ರಣ ಹಾಗೂ ಸ್ವಚ್ಚತೆ ಹೆಸರಿನಲ್ಲಿ ಬೀದಿ ಬದಿಯ ಮೀನು ವ್ಯಾಪಾರಸ್ಥರನ್ನು ನಗರಸಭೆ ಅಧಿಕಾರಿಗಳು ತೆರವು ಮಾಡಿಸುತ್ತಿದ್ದು, ಮೀನು ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಶ್ರೀ ಲಕ್ಷ್ಮೀ ಮೀನುಗಾರರ ಸಹಕಾರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ಗಂಗಾಮತಸ್ಥ ಸಮಾಜಕ್ಕೆ ಸೇರಿದ ನೂರಾರು ಕುಟುಂಬ ಮೀನಿನ ವ್ಯಾಪಾರದಲ್ಲೇ ಜೀವನ ನಡೆಸುತ್ತಿದ್ದಾವೆ. ಇದೀಗ ನಗರಸಭೆ ಅಧಿಕಾರಿಗಳು ಬೀದಿ ಬದಿ ವ್ಯಾಪರಸ್ಥರನ್ನು ತೆರವುಗೊಳಿಸುತ್ತಿದ್ದಾರೆ. ಇದರಿಂದ ನಮ್ಮ ಕುಟುಂಬದ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಕಾಯಿಲೆ ಬರುತ್ತದೆ ತೆರವು ಮಾಡುವ ಮೂಲಕ ಬಡವರ ಮೇಲೆ ದೌರ್ಪ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ ರು.
ವ್ಯಾಪಾರದಿಂದ ಜೀವನ ನಿರ್ವಹಣೆ ಮಾಡಬೇಕಾಗಿದೆ. ಇಲ್ಲದಿದ್ದರೆ ಮಕ್ಕಳನ್ನು ಕಳ್ಳತನಕ್ಕೆ ಬಿಟ್ಟು ನಾವುಗಳು ವಿಷ ಕುಡಿಯಬೇಕಾ ಎಂದು ಅಳಲು ತೋಡಿಕೊಂಡರು. ಮೀನು ವ್ಯಾಪಾರಕ್ಕೆ ಜಾಗ ಕೇಳಿದರೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ಹೇಳುತ್ತಾರೆ ಆದರೆ ಮಳಿಗೆಯ ವ್ಯವಸ್ಥೆ ಇಲ್ಲ, ಕೇವಲ ನಾಲ್ಕು ಅಂಗಡಿ ಇವೆ, ನಾವು ವ್ಯಾಪಾರಸ್ಥರೆ 50 ರಿಂದ 60 ಮಂದಿ ಇದ್ದೇವೆ. ಕೂಡಲೇ ಸರ್ಕಾರ, ನಗರಸಭೆ ಅಧಿಕಾರಿಗಳು ಮೀನು ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸೂಕ್ತ ಸ್ಥಳ ನಿಗದಿ ಮಾಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಜಯಮ್ಮ ನಾಗರಾಜ್, ಗಣೇಶ, ಪ್ರವೀಣ್, ದೇವರಾಜ್, ಆಶಾ,ರತ್ನ, ಚಂದ್ರಕಲಾ, ನಾಗರಾಜ್ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net