ತುಮಕೂರು: ಮೀಟರ್ ಬಡ್ಡಿ ದಂಧೆ ಕಿರುಕುಳಕ್ಕೆ ಹೆದರಿದ ಆಟೋ ಚಾಲಕ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಟವಾಡಿಯ ಮಹಾಲಕ್ಷಿ$್ಮ ನಗರ ವಾಸಿ ಅಂಜನಮೂರ್ತಿ (35) ಮೃತ. ವಿಷ ಸೇವಿಸಿ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್ಆರ್ ಕಾಲನಿ ೈನಾನ್ಸ್ ಸೇರಿ ಬೇರೆ ಬೇರೆ ಕಡೆ 5 ಲಕ್ಷ ರೂ.ವರೆಗೆ ಮೀಟರ್ ಬಡ್ಡಿಗೆ ಸಾಲಪಡೆದಿದ್ದರು ಎನ್ನಲಾಗಿದೆ. ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗುತ್ತಿಲ್ಲ. ಸಾಲಗಾರರ ಕಿರುಕುಳಕ್ಕೆ ಹೆದರಿ ವಿಷ ಸೇವಿಸುತ್ತಿದ್ದು, ನನ್ನ ಕುಟುಂಬಕ್ಕೆ ಪರಿಹಾರ ಕೊಡಿಸುವಂತೆ ವಿಡಿಯೋದಲ್ಲಿ ಅಂಜನಮೂರ್ತಿ ಮನವಿ ಮಾಡಿದ್ದಾರೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.