ಮೀನುಗಾರರ ರಕ್ಷಣೆಗೆ ಕಾನೂನಾತ್ಮಕವಾಗಿ ಹೋರಾಟ

7hnr1
Published on

ಹೊನ್ನಾವರ: ‘ಮೀನುಗಾರರು ತಮ್ಮ ಜಾಗವನ್ನು ಬಿಡಬಾರದು. ಮೀನುಗಾರರ ರಕ್ಷಣೆಗೆ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಕಾಸರಕೋಡ ಮೀನುಗಾರರಿಗೆ ಧೈರ್ಯ ತುಂಬಿದರು.
ಾಸರಕೋಡ ಟೊಂಕಾ ಭಾಗಕ್ಕೆ ಬುಧವಾರ ಭೇಟಿ ನೀಡಿ ಮೀನುಗಾರರ ಸಮಸ್ಯೆಯ ಕುರಿತು ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ನೂರಾರು ವರ್ಷಗಳಿಂದ ಪಾರಂಪರಿಕವಾಗಿ ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುವವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಕರಾವಳಿ ಪ್ರದೇಶದ ಮಿನುಗಾರರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಮೀನುಗಾರರಿಗೆ ಆಗುತ್ತಿರುವ ತೊಂದರೆ, ಅನ್ಯಾಯ, ಮೀನುಗಾರರನ್ನು ಸರ್ಕಾರ ಯಾವ ದೃಷ್ಟಿಯಿಂದ ನೋಡುತ್ತಿದೆ ಎನ್ನುವುದರ ಬಗ್ಗೆ ಪ್ರಮುಖ 20 ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮೀನುಗಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಮೀನುಗಾರರಿಗೆ ಆತ್ಮಸ್ಥೈರ್ಯ ತುಂಬಿದರು.
ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ರಾಜಕಾರಣಿಗಳ ಹಾಗೂ ಸರ್ಕಾರದ ಒತ್ತಡದಿಂದ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿ ಮಾಡಲು ಹೊರಟಿರುವುದು ದುರಂತ. ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಹೊರಟಿರುವುದರಿಂದ ಇಲ್ಲಿನ ಜೀವ ವೈವಿಧ್ಯಮಯವಾಗಿರುವ ಕಾಸರಕೋಡು ಪ್ರದೇಶವೇ ನಾಪತ್ತೆಯಾಗುವ ಸಾಧ್ಯತೆ ದಟ್ಟವಾಗಿದೆ. ಪಕ್ಷಾತೀತವಾಗಿ ಬಂದು ಮೀನುಗಾರರನ್ನು ಉಳಿಸುವ ಕೆಲಸವನ್ನು ಎಲ್ಲಾ ರಾಜಕಾರಿಣಿಗಳು ಮಾಡಬೇಕು ಎಂದರು.
ಮಾಜಿ ಶಾಸಕರಾರ ಶಾರದಾ ಶೆಟ್ಟಿ, ಸತೀಶ ಸೈಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಕಾಂಗ್ರೆಸ್ ಮುಖಂಡರಾದ ನಿವೇದಿತ ಆಳ್ವಾ, ಕೃಷ್ಣ ಗೌಡ, ಎಂ.ಎನ್.ಸುಬ್ರಹ್ಮಣ್ಯ, ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ್, ಮೀನುಗಾರ ಹೋರಾಟ ಸಮಿತಿಯ ಸದಸ್ಯ ವೀವನ್ ಫರ್ನಾಂಡೀಸ್ ಸೇರಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮೀನುಗಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net