ಮೀನುಗಾರರ ಬಲೆಗೆ ಬಿದ್ದ ಮೊಸಳೆ

19bkl1 (1)
Published on

ಭಟ್ಕಳ: ಸ್ಥಳೀಯ ಮೀನುಗಾರರು ಹೆಣೆದ ಬಲೆಗೆ ಮೊಸಳೆಯೊಂದು ಸಿಕ್ಕಿ ಬಿದ್ದಿದೆ. ತಾಲೂಕಿನ ಅಳ್ವೆಕೋಡಿ ನಿವಾಸಿ ಯಶವಂತ ಕೃಷ್ಣ ಮೊಗೇರ ಎಂಬುವರ ಹರಿ ಓಂ ಎಂಬ ದೋಣಿಯಲ್ಲಿ ರಂಪಣಿ ಬಲೆ ಬೀಸಿದ್ದರು. ಬಲೆಯನ್ನು ಎಳೆದು ಮೀನುಗಳನ್ನು ತೆಗೆಯಲೆಂದು ಮೀನುಗಾರರು ಮುಂದಾದಾಗ ಮೊಸಳೆ ಕಂಡು ಒಮ್ಮೆಲೇ ಆತಂಕಗೊಂಡರು. ಸಮುದ್ರದ ಅಬ್ಬರ ಹೆಚ್ಚಿರುವ ಕಾರಣ ವೆಂಕಟಾಪುರ ಹೊಳೆಯ ಹಿನ್ನೀರಿನಿಂದ ಈ ಮೊಸಳೆ ಸಮುದ್ರಕ್ಕೆ ಬಂದಿರಬಹುದು.

ಮೊಸಳೆಯನ್ನು ಬಲೆಯಿಂದ ಬಿಡಿಸಿದ ಮೀನುಗಾರರು, ಅರಣ್ಯ ಇಲಾಖೆ ಅಧಿಕಾರಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಆದರೆ, ಇದರಿಂದ ಹಿಡಿದ ಮೀನು, ಬಲೆ ಸಮೇತ ಮೀನುಗಾರರಿಗೆ ಲಕ್ಷಾಂತರ ರೂ. ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net