ಮೀನು ಹಿಡಿಯಲು ಕೈಗಡಿಗೆ ಬಂದ ಹುಬ್ಬಳ್ಳಿಯ ನಾಲ್ವರು

05 ylp 01
Published on

ಯಲ್ಲಾಪುರ: ತಾಲೂಕಿನ ಗಡಿಭಾಗದ ಕೈಗಡಿ ಬಳಿ ನದಿ ತೀರದಲ್ಲಿ ಸಂಚರಿಸುತ್ತಿದ್ದ ಹುಬ್ಬಳ್ಳಿಯ ನಾಲ್ಕು ಜನರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

ಎರಡು ಬೈಕ್ ಗಳನ್ನು ತಂದಿರುವ ಅವರು ನದಿಯ ತೀರದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದರು. ಹುಬ್ಬಳ್ಳಿಯವರಾದ ಇವರು ಎಲ್ಲ ಚೆಕ್ ಪೋಸ್ಟ್ ಗಳನ್ನು ದಾಟಿಕೊಂಡು ಹೇಗೆ ಬಂದರು, ಅಥವಾ ಲಾಕ್​ಡೌನ್ ಆಗುವ ಮುನ್ನವೇ ಈ ಭಾಗಕ್ಕೆ ಬಂದಿದ್ದಾರೆಯೇ ಎಂಬ ಪ್ರಶ್ನೆ ಮೂಡುವಂತಾಗಿದೆ.

ನದಿ ದಡದಲ್ಲಿ ತಂಗಿದ್ದ ನಾಲ್ವರನ್ನು ಗ್ರಾಮಸ್ಥರಾದ ವಿನಯ ಹೆಗಡೆ ಕೈಗಡಿ, ನಾಗರಾಜ ನಾಯ್ಕ, ಬಾಲು ನಾಯ್ಕ ಇತರರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೀನು ಹಿಡಿಯಲು ನದಿ ದಂಡೆಗೆ ಬಂದಿರುವುದಾಗಿ ಈ ವೇಳೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಳು ನಂತರವಷ್ಟೇ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net