

ನಿಪ್ಪಾಣಿ: ಕಷಿ ಉತ್ಸವದ ಅಂಗವಾಗಿ ಭಾನುವಾರ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಮಿಸೆಸ್ ನಿಪ್ಪಾಣಿ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಥಳಿಯ ಛಾಯಾ ರಾಜೇಂದ್ರ ಪಾಟೀಲ ಪ್ರಥಮ ಸ್ಥಾನ ಗಳಿಸಿ 21 ಸಾವಿರ ರೂ. ಬಹುಮಾನ ಪಡೆದರು.
ಮಹಾರಾಷ್ಟ್ರದ ಇಚಲಕರಂಜಿಯ ವಿಜಯ ದೇವಗೊಂಡ ಗಾಯಕವಾಡ ದ್ವೀತಿಯ ಸ್ಥಾನದೊಂದಿಗೆ 15 ಸಾವಿರ ರೂ., ಸ್ಥಳಿಯ ಐಶ್ವರ್ಯಾ ಶುಭಂ ಖಾಂಡಕೆ ತತೀಯ ಸ್ಥಾನದೊಂದಿಗೆ 10 ಸಾವಿರ ರೂ. ಬಹುಮಾನ ಗಳಿಸಿದರು.
ಮಿಸ್ ನಿಪ್ಪಾಣಿ ಸ್ಪರ್ಧೆಯಲ್ಲಿ ದಿವ್ಯಾ ಕುದ್ರೆ ಪ್ರಥಮ ಸ್ಥಾನ ಪಡೆದು 21 ಸಾವಿರ ರೂ., ನಿಶಾ ಲಕಡೆ ದ್ವೀತಿಯ ಸ್ಥಾನದೊಂದಿಗೆ 15 ಸಾವಿರ ರೂ. ಹಾಗೂ ಸ್ನೇಹಾರಾಣಿ ಕಾಟ್ಕರ್ ತತೀಯ ಸ್ಥಾನದೊಂದಿಗೆ 10 ಸಾವಿರ ರೂ. ಬಹುಮಾನ ಗಳಿಸಿದರು.
ಜಿಮ್ಮಾ ುಗಡಿ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಕಾಗಲ್ ತಾಲೂಕಿನ ಸೊನ್ನಾಳಿಯ ನಾಗನಾಥ್ ಗುಂಪು ಪ್ರಥಮ ಸ್ಥಾನದೊಂದಿಗೆ 25 ಸಾವಿರ ರೂ., ರಾಧಾನಗರ ತಾಲೂಕಿನ ಚಂದ್ರೆ ಗ್ರಾಮದ ಜ್ಞಾನೇಶ್ವರಿ ಗುಂಪು ದ್ವೀತಿಯ ಸ್ಥಾನದೊಂದಿಗೆ 21 ಸಾವಿರ ರೂ., ಆಜರಾದ ದುರ್ಗಾಮಾತಾ ಗ್ರೂಪ್ ತತೀಯ ಸ್ಥಾನದೊಂದಿಗೆ 15 ಸಾವಿರ ರೂ., ಮುರಗುಡ್ನ ಹಿಂದೂಸ್ತಾನ್ ಗ್ರೂಪ್ ನಾಲ್ಕನೇ ಸ್ಥಾನದೊಂದಿಗೆ 7 ಸಾವಿರ ರೂ., ಸಂಕೇಶ್ವರದ ಸಖೊ ಗ್ರೂಪ್ ಐದನೇ ಸ್ಥಾನದೊಂದಿಗೆ 5 ಸಾವಿರ ರೂ. ಬಹುಮಾನ ಪಡೆಯಿತು ವಿಜೇತರಿಗೆ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಸವಪ್ರಸಾದ ಜೊಲ್ಲೆ ಹಾಗೂ ಗಣ್ಯರು ಬಹುಮಾನ ನೀಡಿ ಗೌರವಿಸಿದರು.