

ಹುಬ್ಬಳ್ಳಿ: ಸೃಷ್ಟಿ ಇನ್ಪೋಟೆಕ್ ವತಿಯಿಂದ ಇಲ್ಲಿನ ನ್ಯೂ ಕಾಟನ್ ಮಾರ್ಕೆಟ್ನ ಕರ್ನಾಟಕ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಮಿಸಸ್ ಇಂಡಿಯಾ ಕರ್ನಾಟಕ ಹು-ಧಾ ಫಿನಾಲೆ ಭರ್ಜರಿಯಾಗಿ ನಡೆಯಿತು.
20ರಿಂದ 40, 40ರಿಂದ 60, 60 ವಯಸ್ಸಿನ ನಂತರ ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಮಹಿಳಾ ಮಣಿಗಳು ಕ್ಯಾಟ್ ವಾಕ್ ಮಾಡಿದ್ದಲ್ಲದೆ ತೀರ್ಪಗಾರರು ಕೇಳಿದ ಪ್ರಶ್ನೆಗಳಿಗೆ ತಕ್ಕುದಾದ ಉತ್ತರಗಳನ್ನು ನೀಡಿದರು. 25 ಕೆಟಗೆರಿ ವಿಭಾಗದಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದವರಿಗೆಲ್ಲ ಪ್ರಶಸ್ತಿ ಪತ್ರ ನೀಡಲಾಯಿತು. ಉತ್ತರ ಕರ್ನಾಟಕದ 40 ಮಹಿಳೆಯರು ಭಾಗವಹಿಸಿದ್ದರು.
ಸೃಷ್ಟಿ ಇನ್ಪೋಟೆಕ್ ಸಿಇಒ ಅಶ್ವಿನಿ ಅಣವೇಕರ, ಮಿಸಸ್ ಇಂಡಿಯಾ ಸೌಥ್ 2018 ಮಮತಾ ಕಡೇಮನಿ ಇತರರು ಇದ್ದರು.
EndFragment