

ಬೆಂಗಳೂರು: ರಾಜ್ಯ ಸರ್ಕಾರದ ಬದ್ಧವೆಚ್ಚಗಳ ಮೇಲಿನ ಹೊರೆ ಇಳಿಸಿ ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸರ್ಕಾರಿ ನೌಕರರ ಸಂಖ್ಯೆಯನ್ನು ಶೇ.10 ಕಡಿತ ಮಾಡಲು ಚಿಂತನೆ ನಡೆಸುವ ಮೂಲಕ ರಾಜ್ಯ ಸರ್ಕಾರ ಜೇನುಗೂಡಿಗೆ ಕಲ್ಲೆಸೆಯಲು ಮುಂದಾಗಿದೆ.
ಆಡಳಿತ ಸುಧಾರಣೆಗೆ ವೆಚ್ಚ ತಗ್ಗಿಸಲು ನೌಕರರ ಕಡಿತ, ಇಲಾಖೆಗಳ ವಿಲೀನ ಹಾಗೂ ಇತರ ವಿಚಾರಗಳ ಬಗ್ಗೆ ವರದಿ ನೀಡುವ ಸಂಬಂಧ ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಚಿವ ಸಂಪುಟ ಉಪ ಸಮಿತಿ ಈ ನಿಟ್ಟಿನಲ್ಲಿ ಚರ್ಚೆ ಆರಂಭಿಸಿದೆ. ಅನೇಕ ಹುದ್ದೆ ಬಿಳಿಯಾನೆಗಳಾಗಿರುವ ಕಾರಣ ಇಲಾಖೆಗಳನ್ನೇ ವಿಲೀನಗೊಳಿಸುವ ಮೂಲಕ ಅಗತ್ಯ ಇರುವ ಕಡೆ ಸಿಬ್ಬಂದಿ ಬಳಸಿಕೊಂಡು ನೌಕರರ ಸಂಖ್ಯೆ ಕಡಿಮೆ ಮಾಡುವುದು ಉಪ ಸಮಿತಿಯ ನಿರ್ಧಾರವಾಗಿದೆ. ಬಹಳಷ್ಟು ಇಲಾಖೆಗಳಲ್ಲಿ ಅನಗತ್ಯ ಹುದ್ದೆ, ಆಪ್ತಶಾಖೆಗಳಿದ್ದು, ಅವುಗಳ ರದ್ದತಿ ಬಗ್ಗೆ ಚರ್ಚೆ ನಡೆದಿದೆ. ಈ ರೀತಿ ಮಾಡುವುದರಿಂದ ಹಿರಿಯ ಅಧಿಕಾರಿಗಳ ಕೊರತೆ ಎದುರಾದರೆ ನೌಕರರನ್ನು ಬಳಸಿಕೊಳ್ಳುವ ಬಗ್ಗೆ ಆಲೋಚನೆ ನಡೆದಿದೆ.
ಮಾಹಿತಿ ನೀಡದಿದ್ದರೆ ಛೀಮಾರಿ: ಇಲಾಖೆಗಳ ವಿಲೀನ, ಹುದ್ದೆಗಳ ಮರು ನಿಯೋಜನೆಗೆ ಸಂಬಂಧಿಸಿದಂತೆ ಎಲ್ಲ
ಅಧಿಕಾರಿಗಳಿಗೂ ಕಡಿವಾಣ: ಹಿರಿಯ ಅಧಿಕಾರಿಗಳದ್ದು ಆಡಿದ್ದೇ ಆಟ ಎಂಬಂತಾಗಿದೆ. ಅಧಿಕಾರಿಗಳ ಬಡ್ತಿಗೆ ಯಾವುದೇ ತೊಂದರೆ ಇಲ್ಲ. ಹಿಂದೆ ಕೇವಲ ಇಬ್ಬರು ಎಸಿಎಸ್ಗಳು ಇರುತ್ತಿದ್ದರು. ಆದರೆ ಈಗ ಹದಿನೆಂಟು ಜನರಿದ್ದಾರೆ. ಅದೇ ರೀತಿ ಪೊಲೀಸ್ ಇಲಾಖೆಯಲ್ಲಿರುವ ಎಡಿಜಿಪಿಗಳೆಲ್ಲರಿಗೂ ಕೆಲಸ ಇಲ್ಲ. ಐಎಎಸ್ ಅಧಿಕಾರಿಗಳು ಒಬ್ಬೊಬ್ಬರು ಎರಡು, ಮೂರು ಇಲಾಖೆಗಳಲ್ಲಿ ಜವಾಬ್ದಾರಿ ಹೊಂದಿದ್ದಾರೆ.
ಇದರಲ್ಲಿ ಕೆಲವು ತಾವು ಜವಾಬ್ದಾರಿಯಲ್ಲಿರುವ ಎಲ್ಲ ಇಲಾಖೆಗಳ ವಾಹನ ಬಳಸುತ್ತಿರುವುದರಿಂದ ಇಂಧನ ವೆಚ್ಚ ಹೆಚ್ಚಾಗಿದೆ. ಹೆಂಡತಿ ಹಾಗೂ ಮಕ್ಕಳ ಬಳಕೆಗೂ ಕೆಲವರು ಸರ್ಕಾರಿ ವಾಹನ ಬಳಸುತ್ತಿರುವ ದೂರುಗಳಿವೆ. ಇದಕ್ಕೆ ಕಡಿವಾಣ ಹಾಕಲು ಉಪ ಸಮಿತಿ ನಿರ್ಧರಿಸಿದೆ.
ಹುದ್ದೆಗಳ ರದ್ದು ಹೇಗೆ?
ಇಲಾಖೆಗಳ ವಿಲೀನ ಮಾಡಿ ಅಗತ್ಯ ಇರುವ ಕಡೆ ಸಿಬ್ಬಂದಿ ನಿಯೋಜಿಸಿದ ಬಳಿಕ ಕಂಡು ಬರುವ ಅನಗತ್ಯ ಹುದ್ದೆ ರದ್ದು ಮಾಡಲಾಗುತ್ತದೆ. ಹಿಂದೆ ಕೆಲವು ಸಂದರ್ಭಗಳಲ್ಲಿ ರದ್ದು ಮಾಡಿರುವ ಉದಾಹರಣೆ ಇವೆ.
ಕಿರಿಯ ಸಹಾಯಕರ ಹುದ್ದೆ ರದ್ದು?
ಇ-ಆಫೀಸ್ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಸಚಿವಾಲಯದಲ್ಲಿರುವ 542 ಕಿರಿಯ ಸಹಾಯಕರ ಹುದ್ದೆ ರದ್ದು ಮಾಡುವಂತೆ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚಿಸಿದ್ದಾರೆ. 542ರಲ್ಲಿ ಸದ್ಯ ಕೇವಲ 187 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ರವಿಕುಮಾರ್ ಅವರ ಈ ನಡೆಯನ್ನು ಸಚಿವಾಲಯ ನೌಕರರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ ವಿರೋಧಿಸಿದ್ದವು. ಈ ನಿಲುವಿಗೆ ಸಿಎಂ ತಡೆ ಹಾಕಿದ್ದಾರೆ.
ಬದ್ಧ ವೆಚ್ಚ ಎಷ್ಟು?
ವೇತನಕ್ಕೆ 37291 (ಶೇ. 11)ಕೋಟಿ ರೂ.
ಪಿಂಚಣಿಗೆ 22211 (ಶೇ. 13.60)ಕೋಟಿ ರೂ.
ಬಡ್ಡಿ ಪಾವತಿ 22216 (ಶೇ. 19.20)ಕೋಟಿ ರೂ.
ಒಟ್ಟು ಬದ್ಧ ವೆಚ್ಚ 81718 (ಶೇ 13.80)ಕೋಟಿ ರೂ.
ಕಡತ ವಿಲೇವಾರಿ ಹಂತ ಕಡಿಮೆ
ರಾಜ್ಯದಲ್ಲಿ ಸದ್ಯ 7 ಹಂತದಲ್ಲಿ ನಡೆಯುತ್ತಿರುವ ಕಡತ ವಿಲೇವಾರಿಯನ್ನು 2 ಹಂತಕ್ಕೆ ಇಳಿಸುವುದು ಉಪ ಸಮಿತಿ ಉದ್ದೇಶವಾಗಿದೆ. ಅನೇಕ ಸಂದರ್ಭದಲ್ಲಿ ಹಣಕಾಸು ಇಲಾಖೆಗೆ ಅನಗತ್ಯವಾಗಿ ಕಳುಹಿಸುತ್ತಿದ್ದು, ಅದನ್ನು ತೆಗೆದು ಹಾಕಲಾಗುತ್ತದೆ. ಜಿಲ್ಲಾಧಿಕಾರಿಗಳಿಂದ ಬರುವ ಕಡತಗಳನ್ನು ನೇರವಾಗಿ ಉಪ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮಾತ್ರ ನೋಡಿ ತೀರ್ವನಿಸುವಂತೆ ಮಾಡುವ ಬಗ್ಗೆ ಚರ್ಚೆಯಾಗಿದೆ. ಜಿಲ್ಲಾಧಿಕಾರಿಗಳಿಂದ ಬಂದ ನಂತರ ಕೆಳಹಂತದಿಂದ ಹೋಗುವ ಅಗತ್ಯವಿಲ್ಲ.
ಉಪ ಸಮಿತಿ ಮಾಹಿತಿ ಕಲೆ ಹಾಕುತ್ತಿದೆ. ಸಮಿತಿ ವರದಿ ಬಂದ ನಂತರ ನೌಕರರ ಸಂಘಟನೆ ಜತೆಗೆ ರ್ಚಚಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ನೌಕರರ ಹಿತಕ್ಕೆ ಮಾರಕವಾಗಿದ್ದರೆ ವರದಿ ಒಪು್ಪವ ಪ್ರಶ್ನೆಯೇ ಇಲ್ಲ. -ಸಿ.ಎಸ್. ಷಡಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ ಹುದ್ದೆಗಳ ರದ್ದತಿಯನ್ನು ಯಾವುದೇ ಕಾರಣಕ್ಕೂ ಒಪು್ಪವ ಪ್ರಶ್ನೆಯೇ ಇಲ್ಲ. ಆ ರೀತಿಯಾದರೆ ಸಚಿವಾಲಯ ಬಂದ್ ಮಾಡಿ ಹೋರಾಟ ಮಾಡುತ್ತೇವೆ. ಖಾಲಿ ಹುದ್ದೆ ಭರ್ತಿ ಮೂಲಕ ಹೊರೆ ಕಡಿಮೆ ಮಾಡಬೇಕು. ಇನ್ನಷ್ಟು ಹೊರೆ ಹಾಕಬಾರದು. -ಪಿ. ಗುರುಸ್ವಾಮಿ ಅಧ್ಯಕ್ಷ ರಾಜ್ಯ ಸಚಿವಾಲಯ ನೌಕರರ ಸಂಘ
ರದ್ದತಿಗೆ ಒಪ್ಪದ ಡಿಪಿಎಆರ್
ಡಿಪಿಎಆರ್ನ 53 ಹುದ್ದೆಗಳಿರುವ ಗೆಜೆಟೆಡ್ ಪ್ರೊಬೆಷನರ್ ಸಹಾಯಕ ಹುದ್ದೆಗಳು, 57 ಹಿರಿಯ ಶೀಘ್ರ ಲಿಪಿಗಾರರು, 408 ಶೀಘ್ರ ಲಿಪಿಗಾರರು, 313 ಟೈಪಿಸ್ಟ್, 542 ಕಿರಿಯ ಸಹಾಯಕರ ಹುದ್ದೆಗಳ ಅಗತ್ಯವಿದೆ ಎಂದೇ ಡಿಪಿಎಆರ್ ಉಪ ಸಮಿತಿಗೆ ಮಾಹಿತಿ ನೀಡಿದೆ.
ಹೇಗೆ ನಡೆಯುತ್ತದೆ ವಿಲೀನ ಪ್ರಕ್ರಿಯೆ?
ಬಿಳಿಯಾನೆಯಂತಿರುವ ಕೆಲವು ಇಲಾಖೆಗಳನ್ನು ಆಡಳಿತ ಸುಧಾರಣೆ ಮೂಲಕ ವಿಲೀನ ಮಾಡಲೇಬೇಕಾಗಿದೆ. ಅನಗತ್ಯ ಹುದ್ದೆ ರದ್ದು ಮಾಡಲಾಗುತ್ತದೆ. ಅಗತ್ಯ ಹುದ್ದೆಗಳಿಗಷ್ಟೇ ಮುಂದೆ ನೇಮಕ ಮಾಡಲಾಗುತ್ತದೆ. | ಆರ್. ಅಶೋಕ್ ಕಂದಾಯ ಸಚಿವ, ಉಪ ಸಮಿತಿ ಅಧ್ಯಕ್ಷ
| ರುದ್ರಣ್ಣ ಹರ್ತಿಕೋಟೆ