ಮಿಷನ್ ಇಂದ್ರಧನುಷ್ ಯಶಸ್ಸಿಗೆ ಸೂಚನೆ

IMG-20230907-WA0039 (1)--06
Published on


ಚಿತ್ರದುರ್ಗ: ಮಿಷನ್‌ಇಂದ್ರ ಧನುಷ್ 2ನೇ ಸುತ್ತಿನ ಲಸಿಕಾ ಅಭಿಯಾನದ ಯೋಜಿತ ಗುರಿ ಸಾಧಿಸಲು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಆರೋಗ್ಯಇಲಾಖೆಯೊಂದಿಗೆ ಕೈ ಜೋಡಿಸ ಬೇಕೆಂದು ತಹಸೀಲ್ದಾರ್ ಡಾ.ನಾಗವೇಣಿ ಹೇಳಿದರು.
ತಾಲೂಕು ಕಚೇರಿಯಲ್ಲಿ ಗುರುವಾರ ತಾಲೂಕು ಚಾಲನಾ ಸಮಿತಿ ಸಭೆ ಮತ್ತು ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ‌್ಯಕ್ರಮದ 2ನೇ ತ್ರೈಮಾ ಸಿಕ ಸಭೆಯಲ್ಲಿ ಮಾತನಾಡಿದ ಅವರು,ರಾಷ್ಟ್ರೀಯ ಬಾಲಸ್ವಾಸ್ಥ್ಯಕಾರ್ಯಕ್ರಮದಡಿ ಕಾಲಕಾಲಕ್ಕೆ ಸರಿಯಾಗಿ ಎಲ್ಲ ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸ ಬೇಕೆಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಜಯಶ್ರೀ ಮಾತನಾಡಿ,ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ‌್ಯಕ್ರಮದಲ್ಲಿ 197 ಗರ್ಭಿಣಿಯ ರನ್ನು,671 ಮಂದಿ 2 ವರ್ಷದ ಒಳಗಿನ ಮಕ್ಕಳನ್ನು ಗುರುತಿಸಲಾಗಿದೆ. 124 ಲಸಿಕಾ ಅಧಿವೇಶನಗಳ ನಡೆಯಲಿದ್ದು,ಅಭಿಯಾನದ ಯ ಶಸ್ಸಿಗೆ ಶಿಕ್ಷಣ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಸಮಾಜ ಕಲ್ಯಾಣ ಹಾಗೂ ಪಂಚಾಯತ್‌ರಾಜ್ ಇಲಾಖೆ ಹಾಗೂ ನಗರಸಭೆ ಸಹಕಾರ ಅಗತ್ಯವಿದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ,ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಪ್ರದೀಪ್‌ಕುಮಾರ್,ತಾಲೂಕು ಯೋಜನಾಧಿಕಾರಿ ರಾಘವೇಂದ್ರ,ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಆರ್.ಗೌರಮ್ಮ,ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ,ರಾಷ್ಟ್ರೀಯ ಬಾಲಸ್ವಾಸ್ಥ್ಯಕಾರ‌್ಯಕ್ರಮ ಅಧಿಕಾರಿ ಡಾ. ಮ ಹೇಂದ್ರಕುಮಾರ್,ಡಾ. ಸುಪ್ರೀತಾ,ಡಾ.ವಾಣಿ,ಡಾ.ಮಂಜುಳಾ,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್,ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ,ತಾಲ್ಲೂಕು ವ್ಯವಸ್ಥಾಪಕ ಅಲಿ ಹಬೀಬ್ ಇದ್ದರು.

(ಸಿಟಿಡಿ 7 ಡಾ.ನಾಗವೇಣಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net