ಮಿಷನ್ ಇಂದ್ರಧನುಷ್ 5.0 ಅಭಿಯಾನ

CTD 3 INDRA--01
Published on

ಚಿತ್ರದುರ್ಗ: ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳಿಂದ ವಂಚಿತರಾದಂತಹ ಜಿಲ್ಲೆಯ 5 ವರ್ಷದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭೀ ಣಿಯರಿಗೆ ಲಸಿಕೆಗಳನ್ನು ಪೂರ್ಣಗೊಳಿಸಲು ಮಿಷನ್ ಇಂದ್ರಧನುಷ್ 5.0 ಅಭಿಯಾನ ಆಯೋಜಿಸಲಾದೆ ಎಂದು ಆರ್‌ಸಿಎಚ್ ಅಧಿ ಕಾರಿ ಡಾ.ರೇಣುಪ್ರಸಾದ್ ಹೇಳಿದರು.

ಡಿಸಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಪರಿಣಾಮಕಾರಿ ಮಿಷನ್ ಇಂದ್ರಧನುಷ್-5.0 ಲಸಿಕಾ ಕಾರ‌್ಯಕ್ರಮದ ಜಿಲ್ಲಾಮಟ್ಟದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಲಸಿಕಾ ಅಭಿಯಾನ 3 ಸುತ್ತುಗಳಲ್ಲಿ ನಡೆಯಲಿದೆ. ಆ.7ರಿಂದ 12, ಸೆಪ್ಟೆಂಬರ್ 11ರಿಂದ 16 ಮತ್ತು ಅಕ್ಟೋಬರ್ 9ರಿಂದ 14ರವರೆಗೆ ನಡೆಯಲಿದ್ದು,ಪ್ರತಿ ತಿಂಗಳಲ್ಲಿ ಆರು ದಿನ ಲಸಿಕೆ ಹಾಕಲಾಗುತ್ತದೆ.
ಜಿಲ್ಲೆಯ ಆರು ತಾಲೂಕುಗಳಲ್ಲಿ ಈಗಾಗಲೇ ಲಸಿಕೆಯಿಂದ ವಂಚಿತರಾದವರನ್ನು ಗುರುತಿಸಲಾಗಿದೆ.

ಯಾವುದೇ ಮಗು ಲಸಿಕೆಯಿಂ ದ ಮತ್ತೆ ವಂಚಿತವಾಗದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮವಹಿಸಬೇಕು. ಇಂದ್ರಧನುಷ್ ಲಸಿಕಾ ಅಭಿಯಾನದ ಯ ಶಸ್ಸಿಗೆ ಸಿದ್ದತೆ ಕೈಗೊಳ್ಳಲಾಗಿದೆ.

900 ಗರ್ಭಿಣಿಯರು,2 ವರ್ಷದೊಳಗಿನ 3418 ಮಕ್ಕಳು,2ರಿಂದ 5 ವರ್ಷ ಒಳಗಿನ 57 ಮಕ್ಕಳಿಗೆ ಲಸಿಕೆ ನೀಡಲಾಗುವುದು. ಮ ಕ್ಕಳ ತಜ್ಞರು ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತಿದ್ದು, 398 ದಡಾರ ಹಾಗೂ ರುಬೆಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ಸಹ ನೀಡಲಾಗುತ್ತಿದೆ ಎಂದರು.

ಡಬ್ಲ್ಯೂಎಚ್‌ಒ ಸಮಾಲೋಚಕ ಶ್ರೀಧರ್ ಮಾತನಾಡಿ,12 ಮಾರಕ ರೋಗಗಳ ವಿರುದ್ಧ ಲಸಿಕೆ ನೀಡಲಾಗುತ್ತಿದೆ. ಪೊಲೀಯೋ ದಿಂ ದ ಮುಕ್ತವಾಗಿರುವ ನಮ್ಮ ದೇಶದಲ್ಲಿ 2023ರ ಡಿಸೆಂಬರ್ ಅಂತ್ಯದೊಳಗೆ ದಡಾರ ಮತ್ತು ರುಬೆಲ್ಲಾ ರೋಗಗಳ ನಿರ್ಮೂಲನೆ ಗುರಿ ಇ ದೆ ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಸಿ.ಒ.ಸುಧಾ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್,ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪಿ.ಲೋಕೇಶ್ವರಪ್ಪ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ,ತಾಲೂಕು ಆ ರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net