ಜಿಲ್ಲಾ ಕೇಂದ್ರದಿAದ ಆರೇಳು ಕಿ.ಮೀ.ದೂರ ಕೈಮರ ಸಮೀಪದ ಹೊಸಳ್ಳಿಗ್ರಾಮದ ಶ್ರೀಗುರು ನಿರ್ವಾಣಸ್ವಾಮಿ ಮಠದ ಪಲ್ಲಕ್ಕಿಹರದಲ್ಲಿ ವರ್ಷದ ಹಿಂದೆ ಪ್ರಾರಂಭಿಸಿದ್ದ ಮಿಯಾವಾಕಿ ಕಿರು ಅರಣ್ಯ ೨ನೆಯ ಹಂತದ ವಿಸ್ತರಣಾಕರ‍್ಯಕ್ಕೆ ಮಳೆಯ ನಡುವೆಯೂ ಇಂದು ಚಾಲನೆನೀಡಿ ಅವರು ಮಾತನಾಡಿದರು.
ಸುಮಾರು ೫ಗುಂಟೆ ಹರದ ಜಾಗದಲ್ಲಿ ದ್ವಿತೀಯ ಹಂತದ ಕಿರು ಅರಣ್ಯ ವಿಸ್ತರಣಾ ಯೋಜನೆ ಅನ್ವಯ ಸುಮಾರು ೫೦೦ಸಸಿಗಳನ್ನು ನೆಡಲಾಗುತ್ತಿದೆ. ಕಳೆದವರ್ಷ ಮೇ೧೮ ರಂದು ಇಲ್ಲಿ ೪,೦೦೦ ಚದರಡಿಯಲ್ಲಿ ಮಾವು, ಹಲಸು, ಪನ್ನೇರಳೆ, ಹುಣಸೆ, ನೆಲ್ಲಿ, ಸೀಬೆ, ಸಂಪಿಗೆ, ಮತ್ತಿ, ಅತ್ತಿ ಸೇರಿದಂತೆ ಸುಮಾರು ೬೫೦ ಸಸಿಗಳನ್ನು ಪ್ರಥಮ ಹಂತದಲ್ಲಿ ನೆಟ್ಟಿದ್ದು ಅವೆಲ್ಲ ಉತ್ತಮ ಗಿಡಗಳಾಗಿ ಹಸಿರನ್ನು ಪಸರಿಸಿರುವುದು ವಿಸ್ತರಣಾ ಕರ‍್ಯಕ್ಕೆ ಪ್ರೇರಣೆ ಎಂದರು.
ಮಿಯಾವಾಕಿ ವಿಧಾನದ ಅರಣ್ಯದಲ್ಲಿ ಹಸಿರು ಹೆಚ್ಚಾಗಿದೆ. ಹಕ್ಕಿಪಕ್ಷಿಗಳು, ಚಿಟ್ಟೆದುಂಬಿಗಳು, ಚಿಕ್ಕಪುಟ್ಟ ಪ್ರಾಣಿಗಳು ಆಶ್ರಯ ಪಡೆಯಬಹುದು. ಸರ‍್ಯಕಿರಣಗಳು ಇಲ್ಲಿ ನೆಲ ತಲುಪುವುದು ಕಷ್ಟವಾಗಲಿದ್ದು ಕಳೆ ಬೆಳೆಯಲು ಅವಕಾಶವಿಲ್ಲ. ಪ್ರಪಂಚದ ವಿವಿಧೆಡೆ ವಿಶೇಷವಾಗಿ ನಗರಪ್ರದೇಶಗಳಲ್ಲಿ ೩೦ಚದರಡಿಯ ಚಿಕ್ಕ ಪ್ರದೇಶದಲ್ಲಿ ಅರಣ್ಯ ಸೃಷ್ಟಿಸುವ ಕರ‍್ಯ ಇದಾಗಿದೆ ಎಂದ ಅಜಯ್, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಇಲಾಖೆಗಳೂ ಈ ನಿಟ್ಟಿನಲ್ಲಿ ಆಸಕ್ತಿವಹಿಸಬಹುದೆೆಂದರು.
ಜಪಾನಿನ ಸಸ್ಯಶಾಸ್ತçಜ್ಞ-ಪರಿಸರವಾದಿ ಪ್ರೊ.ಅಕಿರಾ ಮಿಯಾವಾಕಿ ೧೯೮೦ರ ದಶಕದಲ್ಲಿ ಕಿರು ಪ್ರದೇಶಗಳಲ್ಲೆ ಒತ್ತೊತ್ತಾಗಿ ಸ್ಥಳೀಯ ಸಸ್ಯಪ್ರಬೇಧಗಳನ್ನು ಬೆಳೆಸುವ ನೂತನಪದ್ಧತಿ ಜಗತ್ತಿಗೆ ಪರಿಚಯಿಸಿದರು. ಗಿಡಗಳು ಬೆಳಕು ಮತ್ತು ಶಾಖ ಪಡೆಯಲು ಹಾಗೂ ಅಸ್ಥಿತ್ವಕ್ಕಾಗಿ ವೇಗಗತಿಯಲ್ಲಿ ಸ್ಪರ್ಧಾತ್ಮಕವಾಗಿ ಊರ್ಧ್ವಮುಖಿಯಾಗಿ ಬೆಳೆಯುತ್ತದೆ ಎಂದ ಅಜಯ್, ಇಲ್ಲಿ ಸಾಮಾನ್ಯ ಅರಣ್ಯಕ್ಕಿಂತ ಹತ್ತುಪಟ್ಟು ವೇಗವಾಗಿ ಬೆಳವಣಿಗೆ ಕಾಣಬಹುದು. ಭೂಮಿಕೊರತೆ ವ್ಯಾಪಕವಾಗಿರುವ ಹಿನ್ನಲೆಯಲ್ಲಿ ಸಣ್ಣ ಪ್ರದೇಶಗಳಲ್ಲಿ ಹಸಿರುಕ್ಕಿಸುವ ಪದ್ಧತಿ ಇದಾಗಿದೆÉ. ಮಕ್ಕಳ ಮೂಲಕ ಸಮಾಜದಲ್ಲಿ ಹಸಿರು ಜಾಗೃತಿ ಮೂಡಿಸುವ ಪುಟ್ಟ ಪ್ರಯತ್ನವಿದು ಎಂದರು.
ಪರಿಸರಪ್ರಿಯ ಜನಮುಖಿ ಕರ‍್ಯದಲ್ಲಿ ತೊಡಗಿಸಿಕೊಂಡಿರುವ ನಿರ್ವಾಣಸ್ವಾಮಿ ಮಠದಮನೆಯ ಅನ್ವಿತಾಅಜಯ್ ಮತ್ತು ಅರ‍್ವಾಅಜಯ್, ಅರಳಗುಪ್ಪೆ ಕುಟುಂಬದ ಎ.ಎನ್.ಧ್ರುವ್‌ನಿತಿನ್ ಮತ್ತು ತೊಗರಿಹಂಕಲ್ ಕುಟುಂಬದ ವೇದಾಂತ್ ಮತ್ತು ಸಿರಿನಂದನ್ ಈ ಐವರುಮಕ್ಕಳು ತಮ್ಮ ಬಂಧುಗಳು ಹಾಗೂ ಸ್ನೇಹಿತರೊಂದಿಗೆ ಮಿಯಾವಾಕಿ ವಿಧಾನ ಅನುಸರಿಸಿ ಸಸಿ ಬೆಳೆಸುವ ಕರ‍್ಯವನ್ನು ಕಳೆದವರ್ಷ ಆರಂಭಿಸಿದ್ದರು. ರೌಂಡ್ ಟೇಬಲ್ ಘಟಕವೂ ಸಹಕಾರ ನೀಡಲು ಮುಂದೆ ಬಂದಿದೆ. ಸಸಿ ಪೋಷಣೆಯಲ್ಲೂ ತೊಡಗಿಸಿಕೊಂಡಿದ್ದು ಗಿಡಗಳು ಎತ್ತರಕ್ಕೆ ಬೆಳೆದಂತೆಲ್ಲ ಹರ್ಷಿಸಿ ಸಂಭ್ರಮಿಸಿದ ಪರಿಣಾಮ ಪೋಷಕರು ಕಿರುಅರಣ್ಯ ದುಪ್ಪಟ್ಟಾಗಿಸಲು ಸಹಕರಿಸಿದ್ದಾರೆ. ಇಂದಿನಿAದ ಮಾವು, ಹಲಸು, ಸೀಬೆ, ನೆರಳೆ, ಸಾಗುವಾನಿ, ನಂದಿ, ಮಹಾಗನಿ, ಗೋಣಿ ಸೇರಿದಂತೆ ಸ್ಥಳೀಯ ಕಾಡುಮರಗಳ ಸಸಿಗಳನ್ನು ನೆಡುವ ಕರ‍್ಯ ಆರಂಭಿಸಲಾಗಿದೆ.
ಶ್ರೀಮಠದ ವರ್ಷದ ಜಾತ್ರೆ ಸಂದರ್ಭದಲ್ಲಿ ಮಾತ್ರ ಹೆಚ್ಚು ಬಳಕೆಗೊಳ್ಳುತ್ತಿದ್ದ ಪಲ್ಲಕ್ಕಿಹರ ಸುತ್ತಲಿನಜನ ತ್ಯಾಜ್ಯ ಸುರಿಯುವ ತಾಣವಾಗಿತ್ತÀÄ. ಮಕ್ಕಳ ಆಸಕ್ತಿಯಪಲವಾಗಿ ಇಲ್ಲಿ ವೈವಿಧ್ಯಮಯವಾದ ಗಿಡಗಳು ಆಳೆತ್ತರ ಬೆಳೆದುನಿಂತಿವೆ. ೪,೦೦೦ಚದರಡಿ ಪ್ರದೇಶಕ್ಕೆ ಬೇಲಿನಿರ್ಮಿಸಿ ಕಿರುಅರಣ್ಯಕ್ಕೆ ರಕ್ಷಣೆ ಒದಗಿಸಲಾಗಿದೆ. ಪಕ್ಕದ ಭÀÆಮಿಯನ್ನೂ ಜೆಸಿಬಿ ಬಳಸಿ ಸಮತಟ್ಟುಗೊಳಿಸಲಾಗಿದೆ. ಮೂರುಅಡಿ ಆಳದ ಮಣ್ಣುತೆಗೆದು ಹಸುವಿನಗೊಬ್ಬರ, ಕಬ್ಬಿನಜಲ್ಲೆಪುಡಿ, ಹೊಸಮಣ್ಣು ಮಿಶ್ರಣವನ್ನು ಹರವಲಾಗಿದೆ. ವಾರದಿಂದ ಬೀಳುತ್ತಿರುವ ಮಳೆ ಭೂಮಿಯನ್ನು ಹಸನಗೊಳಿಸಿದೆ. ಹೊಸತಂತ್ರಜ್ಞಾನದ ಗುಳಿತೆಗೆಯುವ ಯಂತ್ರಬಳಸಿ ಮೂರುಅಡಿಗೊಂದು ಗುಳಿತೆಗೆದು ಸ್ಥಳೀಯ ಸಸ್ಯಪ್ರಬೇಧಗಳನ್ನು ಇಂದಿನಿAದ ನೆಡಲಾಗುತ್ತಿದೆ. ಸುರಿಯುವ ಮಳೆಯ ನಡುವೆಯೂ ಬಂಧುಮಿತ್ರರೂ ಒಂದೊAದುಗಿಡ ನೆಟ್ಟು ಬೆಂಬಲಿಸುತ್ತಿದ್ದಾರೆ. ವಾರದೊಳಗೆ ೫೦೦ಸಸಿಗಳ ಆರೋಹಣಕ್ಕೆ ವ್ಯವಸ್ಥೆಯಾಗಿದೆ.
ಚಿಕ್ಕಮಗಳೂರು ರೌಂಡ್‌ಟೇಬಲ್ ಅಧ್ಯಕ್ಷ ರಾಷ್ಟಿçತ್ ಮತ್ತು ಯುವಜನಸಂಯೋಜಕ ವಿನಯ್‌ರಾಜ್, ಮಕ್ಕಳಸಾಹಸ ಅಭಿನಂದಿಸಿದರು. ಜನಸಂಖ್ಯೆ ಹೆಚ್ಚಳದಿಂದ ಕೃಷಿಭೂಮಿ-ಅರಣ್ಯಗಳೆಲ್ಲ ಕಾಂಕ್ರೀಟಿಕರಣಗೊಳ್ಳುತ್ತಿದೆ. ಜಾಗತಿಕ ತಾಪಮಾನ ಹೆಚ್ಚಾಗಿ ಭೂಮಂಡಲವೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ವಿಶ್ವದ ಪರಿಸರತಜ್ಞರು ಹಸಿರು ಹೆಚ್ಚಿಸುವ ಪರಿಹಾರ ಸೂಚಿಸಿರುವ ಸಂದರ್ಭದಲ್ಲಿ ನಮ್ಮೂರಮಕ್ಕಳು ಕಿರು ಅರಣ್ಯ ನಿರ್ಮಿಸುವ ಪ್ರಯತ್ನ ಮಾದರಿ ಎಂದರು.
ಪರಿಸರ ಪ್ರೇಮಿಗಳಾದ ಅರ್ಪಿತಾ-ನಿತಿನ್, ನಂದನ್-ಶ್ರೇಯಾ ಮತ್ತು ಅಶ್ವಿನಿ ದಂಪತಿಗಳು, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಪ್ರಭುಲಿಂಗಶಾಸ್ತಿç, ಮತ್ತಿತರರು ಸಾಕ್ಷೀಕರಿಸಿದರು.