ಮಿಮಿಕ್ರಿ ಗೋಪಿ, ಉಮ್ಮತ್ತೂರು ಬಸವರಾಜ್ ಜುಗಲ್ ಬಂಧಿ

IMG-20250930-WA0055
Published on

ಚಾಮರಾಜನಗರ : ಅಖಿಲ ಕರ್ನಾಟಕ ಕನ್ನಡ ಮಹಾಸಭಾ ವತಿಯಿಂದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆದ 7ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಗಾಯನ, ನೃತ್ಯ, ಮಿಮಿಕ್ರಿ ಕಾಮಿಡಿ, ಹಾಸ್ಯ ಸಂಜೆ ಕಾರ್ಯಕ್ರಮ ಗಮನ ಸೆಳೆಯಿತು.

ನಗರದ ಶ್ರೀಚಾಮರಾಜೇಶ್ವರಸ್ವಾಮೀ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಮಿಮಿಕ್ರಿ ಗೋಪಿ ಅವರ ಜಬರ್ ದಸ್ತ್ ಕಾಮಿಡಿ ಪ್ರೇಕ್ಷಕರನ್ನು ರಂಜಿಸಿತು. ಸೋಬಾನೆ ಪದ ಪ್ರೇಕ್ಷಕರಿಗೆ ಇಂಪು ನೀಡಿತು. ಅವತಾರ್ ಡ್ಯಾನ್ಸ್ ಇನ್ಸ್ ಟ್ಯೂಟ್ ತಂಡ ಸಾದರಪಡಿಸಿದ ನೃತ್ಯ ವೈಭವ ಗಮನ ಸೆಳೆದು ಪ್ರೇಕ್ಷಕರಿಗೆ ಮುದ ನೀಡಿತು.

ಉಮ್ಮತ್ತೂರು ಬಸವರಾಜು , ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಶಂಕರ್ ನಾಗ್ ತಂಡ ನಡೆಸಿಕೊಟ್ಟ ಹಾಸ್ಯ ಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ನಕ್ಕುನಗಿಸಿತು. ಕನ್ನಡ ಚಳವಳಿಗಾರರು ಸತ್ಯ ಹರಿಶ್ಚಂದ್ರ ಚಿತ್ರ ಹಾಡಿಗೆ ಕುಣಿದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಕಲಾವಿದರನ್ನು ಸನ್ಮಾನಿಸಿದರು. ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಮಾಜಿ ಸದಸ್ಯ ಗಣೇಶ್ ದೀಕ್ಷಿತ್, ಉದ್ಯಮಿ ಶ್ರೀನಿಧಿ ಕುದರ್, ಕನ್ನಡ ಚಳವಳಿಗಾರ ವರದನಾಯಕ, ಗೋವಿಂದರಾಜ ಮುತ್ತಿಗೆ, ಜಗದೀಶ್, ಜಿ.ಬಂಗಾರು, ಪಣ್ಯದಹುಂಡಿ ರಾಜ್, ಚಾ.ವೆಂ.ರಾಜ್ ಗೋಪಾಲ್,ಮಹೇಶ್ ಗೌಡ , ಆಟೋ ಲಿಂಗರಾಜು, ಶಿವಣ್ಣ, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net