ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶೀಘ್ರ ಅನುಮೋದನೆ

Balachandra JarkiHoli
Published on

ಮೂಡಲಗಿ: ಪಟ್ಟಣದ ಬಸವೇಶ್ವರ ನಗರದ ಬಳಿ ನಿರ್ಮಿಸಲು ಉದ್ದೇಶಿಸಿರುವ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರ್ಕಾರ ಶೀಘ್ರ ಅನುಮೋದನೆ ನೀಡಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪುರಸಭೆ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, ಪಟ್ಟಣದ ತಹಸೀಲ್ದಾರ್ ಕಚೇರಿ ಹತ್ತಿರ 2.04 ಎಕರೆ ನಿವೇಶನ ಗುರುತಿಸಲಾಗಿದ್ದು, 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ತಲೆ ಎತ್ತಲಿದೆ. ಅಲ್ಲದೆ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೂ ಪಟ್ಟಣದ ಎಪಿಎಂಸಿ ಬಳಿ ನಿವೇಶನ ನೀಡಲಾಗಿದ್ದು, ಇದೇ ಆರ್ಥಿಕ ವರ್ಷದಲ್ಲಿ ಮಂಜೂರಾಗಲಿದೆ ಎಂದರು.

ಪಟ್ಟಣದ ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಪುರಸಭೆ ವ್ಯಾಪ್ತಿಯ ಕೃಷಿ ಜಮೀನುಗಳನ್ನು ಕೃಷಿಯೇತರ (ಎನ್‌ಎ) ಜಮೀನುಗಳನ್ನಾಗಿ ಪರಿವರ್ತಿಸಿ ಮನೆಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ 3200ಕ್ಕೂ ಹೆಚ್ಚು ಮನೆಗಳ ನೋಂದಣಿಗಾಗಿ ಪುರಸಭೆ ಅಭಿವೃದ್ಧಿ ನಿಧಿ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹುಸೇನಸಾಬ್ ಶೇಖ್, ಸುಭಾಷ ಸಣ್ಣಕ್ಕಿ, ಜಯಾನಂದ ಪಾಟೀಲ, ಆನಂದ ಟಪಾಲ, ಶಿವು ಸಣ್ಣಕ್ಕಿ, ಅನ್ವರ್ ನದ್ಾ, ಬಸು ಝಂಡೇಕುರುಬರ, ರಾಜು ಪೂಜೇರಿ, ಪ್ರಕಾಶ ಮುಗಳಖೋಡ, ನನ್ನುಸಾಬ್ ಶೇಖ್, ಮುಖ್ಯಾಧಿಕಾರಿ ದೀಪಕ ಹರ್ದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net