ಮಿನಿ ತುಳಜಾಪುರಕ್ಕೆ ಭಕ್ತರ ದಂಡು

tuljapur bhavani statue
Published on

ಔರಾದ್: ತಾಲೂಕಿನ ತುಳಜಾಪುರ ಗ್ರಾಮದ ಹೊರವಲಯದಲ್ಲಿನ ಶ್ರೀ ಭವಾನಿ ಮಾತೆ ದೇವಸ್ಥಾನಕ್ಕೆ ನವರಾತ್ರಿ ನಿಮಿತ್ತ ಭಕ್ತರ ದಂಡು ಹರಿದು ಬರುತ್ತಿದ್ದು, ಮಿನಿ ತುಳಜಾಪುರ ಎಂದೇ ಖ್ಯಾತಿಯಾದ ಇಲ್ಲಿ ನಿತ್ಯ ವಿಶೇಷ ಪೂಜಾ ಕೈಂಕರ್ಯ ನಡೆಯುತ್ತಿವೆ.

ಗ್ರಾಮದ ಹೊರವಲಯದ ಗುಡ್ಡದ ಮೇಲಿರುವ ಭವಾನಿ ಮಂದಿರದಲ್ಲಿ ಘಟಸ್ಥಾಪನೆ ಮಾಡಿದ್ದು, ನಿತ್ಯ ಬೆಳಗ್ಗೆ, ರಾತ್ರಿ ಆರತಿ, ಭಜನೆ ಇತರ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ನವರಾತ್ರಿಯ ೧೦ ದಿನದವರೆಗೆ ಪ್ರಸಾದ ದಾಸೋಹ ವ್ಯವಸ್ಥೆ ನಡೆಯಲಿದೆ. ನವರಾತ್ರಿ ನಿಮಿತ್ತ ಭವಾನಿ ಮಾತೆ ಮೂರ್ತಿ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಲಿವೆ.

ದೂರದ ಮಹಾರಾಷ್ಟçದ ತುಳಜಾಪುರಕ್ಕೆ ಹೋಗಲು ಆಗದ ಭಕ್ತರು ಮಿನಿ ತುಳಜಾಪುರದ ಭವಾನಿ ಮಾತೆ ಮಂದಿರಕ್ಕೆ ಬಂದು ಹರಕೆ ತೀರಿಸುತ್ತಾರೆ. ಜಿಲ್ಲೆ ಸೇರಿ ಮಹಾರಾಷ್ಟç, ತೆಲಂಗಾಣದ ಸಹಸ್ರಾರು ಭಕ್ತರು ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಶಕ್ತಿ ಪೀಠವಾಗಿ ದೇವಿ ಎಲ್ಲರನ್ನು ಕಾಪಾಡುತ್ತಿದ್ದಾಳೆ. ಭಕ್ತರ ಧಣಿವು ತಣಿಸುವ ತಾಯಿ ಭವಾನಿ ಮಹಿಮೆ ಅಪಾರ ಎಂಬುದು ಭಕ್ತರ ನಂಬಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net