

ಕಲಬುರಗಿ: ಅಯ್ಯೊಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಡೀ ನಗರ ಮಿನಿ ಅಯೋಧ್ಯೆಯಾಗಿ ಮಾರ್ಪಟ್ಟಿದ್ದು, ನಗರದ ಎಲ್ಲ ದೇವಸ್ಥಾನಗಳಲ್ಲಿ, ಬಡಾವಣೆಗಳಲ್ಲಿ ಕೇಸರಿ ಧ್ವಜಗಳಿಂದ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದು, ನಸುಕಿನ ಜಾವದಿಂದಲೇ ವಿಶೇಷ ಪೂಜೆ, ಅಲಂಕಾರ, ಅಭಿಷೇಕ,, ಮಹಾಮಂಗಳಾರತಿ ಪ್ರಸಾದ ವಿತರಣೆ ಕಾರ್ಯಕ್ರಮಗಳು ಆರಂಭವಾಗಿದೆ.
ಇಂದು ಮಧ್ಯಾಹ್ನ ನಡೆಯಲಿರುವ ಶ್ರೀ ರಾಮ ಜನ್ಮ ಭೂಮಿಯಲ್ಲಿನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆಗೆ ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೇರಿ ಹಲವು ಕಡೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಸಂಜೆ ದೀಪೋತ್ಸವ ನಡೆಯಲಿದ್ದು ಸಹಸ್ರಾರು ಭಕ್ತರು ದೇವಸ್ಥಾನಗಳಲ್ಲಿ ಸೇರಲಿದ್ದಾರೆ. ವಿವಿಧ ಸಂಘಟನೆಗಳವರು ರಾಮೋತ್ಸವ ಆಚರಣೆ ಸಜ್ಜಾಗಿದ್ದು ಬೆಳಗ್ಗೆಯಿಂದಲೇ ವಿಶೇಷ ಕಾರ್ಯಕ್ರಮಗಳು ಆರಂಭವಾಗಿವೆ.
ಶರಣಬಸವೇಶ್ವರ ದೇವಸ್ಥಾನದಲ್ಲಿ ದೀಪೋತ್ಸವದ ಜೊತೆಗೆ ವಿಶೇಷ ಉಪನ್ಯಾಸವಿರಲಿದೆ. ನಗರದ ವಿವಿಧ ಕಡೆ ಶ್ರೀರಾಮ ಜನ್ಮ ಭೂಮಿಗೆ ಕರಸೇವೆ ಸಲ್ಲಿಸಿದ ಕನಸೇವಕರಿಗೆ ಸನ್ಮಾನ ಅಭಿನಂದನಾ ಕಾರ್ಯಕ್ರಮಗಳು ನಡೆಯುತ್ತಿವೆ.