

ಮೈಸೂರು: ಧರ್ಮಾಧಾರಿತ ರಾಜಕಾರಣ ಮಿತಿ ಮೀರಿರುವ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆ ಪ್ರಸ್ತುತವಾಗುತ್ತವೆ ಎಂದು ಹುಣಸೂರು ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ ಅಧ್ಯಯನ ವಿಭಾಗದ ಸಹಾಂುಕ ಪ್ರಾಧ್ಯಾಪಕ ಡಾ.ಚಿದಾನಂದ ಹೇಳಿದರು.
ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ವತಿಯಿಂದ ವಿಶ್ವಮೈತ್ರಿ ಬುದ್ಧ ವಿಹಾರ ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಲೇಖಕ ಶಿವಸುಂದರ್ ರಚಿತ ‘ಸಂವಿಧಾನ ವರ್ಸ್‌ಸ್ ಸಂಗಳ ಸುಳ್ಳು ಅಭಿಂಾನ ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಧರ್ಮಧಾರಿತ ರಾಜಕಾರಣ ಬಹುದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ವಿಚಾರಧಾರೆ ಪ್ರಸ್ತುತ ಎನಿಸುತ್ತದೆ. ಅಂಬೇಡ್ಕರ್ ಬದುಕಿದ್ದರೆ, ಅಸ್ಪಶ್ಯತೆ ಎಂಬುದನ್ನು ಮರು ವರ್ಗೀಕರಿಸುತ್ತಿದ್ದರೇನೋ ಅನಿಸುತ್ತಿದೆ ಎಂದರು.
ಜಗತ್ತಿನಲ್ಲಿ ಎಲ್ಲೆಡೆ ಯುದ್ಧ ಕಾರ್ಮೋಡ ಕವಿದಿದೆ. ಧರ್ಮ ರಾಜಕಾರಣಕ್ಕಾಗಿಯೇ ಯುದ್ಧಗಳು ಸಂಭವಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಲೇಖಕ ಶಿವಸುಂದರ್ ವಾತನಾಡಿದರು. ವಾಜಿ ಮೇಯರ್ ಪುರುಷೋತ್ತಮ್ ಇತರರು ಇದ್ದರು.