ಮಿಕ್ಸಿ ಬಾಂಬ್ಸ್ ಸ್ಪೋಟ; ಆರೋಪಿ ಬಂಧಿನ

ಮಿಕ್ಸಿ ಬಾಂಬ್ಸ್ ಸ್ಪೋಟ; ಆರೋಪಿ ಬಂಧಿನ
Published on

ಹಾಸನ : ಮಿಕ್ಸಿ ಬಾಂಬ್ಸ್ ಸ್ಪೋಟ ಪ್ರಕರಣ ಮಹಿಳೆಯ ಮೇಲಿನ ದ್ವೇಷದ ಹಿನ್ನೆಲೆಯಲ್ಲಿಯೇ ನಡೆದಿರುವುದಾಗಿ ತನಿಖೆಯಿಂದ ಬಯಲಾಗಿದ್ದು ಡಿ. 7 ರವರೆಗೆ ಆರೋಪಿಯನ್ನು ಬಂಧಿಸಿ ಕಸ್ಟಡಿಗೆ ವಹಿಸಲಾಗಿದೆ ಎಂದು ಎಸ್.ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದರು.

ಬೆಂಗಳೂರಿನ ನೆಲಮಂಗಲ ತಾಲೂಕಿನ ತಲಘಟಪುರ ನಿವಾಸಿಯಾಗಿರುವ ಅನೂಪ್ ಕುಮಾರ್ (42) ಈತ ಮೆಟ್ರೋಮನಿ ವೆಬ್ ಸೈಟ್ ನಲ್ಲಿ ವಸಂತಾ ಎಂಬಾಕೆಗೆ ಪರಿಚಯವಾಗಿದ್ದು, ನಂತರ ಆಕೆ ಮದುವೆಗೆ ನಿರಾಕರಿಸಿದ್ದು, ಆತ ಹಾಸನಕ್ಕೆ ಬಂದಾಗ ವಸಂತಾ ಅವರ ಮನೆಯ ಎದುರೇ ತನನ್ನು ನಿಂಧಿಸಿದ್ದನ್ನು ಸಹಿಸದೆ ಕೊಲೆ ಮಾಡುವ ಉದ್ದೇಶದಿಂದ ಮಿಕ್ಸಿಯಲ್ಲಿ ಡೆಟೋನೇಟರ್ ಅಳವಡಿಸಿ ಕೊಲೆಗೆ ಸಂಚು ರೂಪಿಸಿದ್ದೆ ಎಂಬುದಾಗಿ ಅನೂಪ್ ಹೇಳಿಕೆ ನೀಡಿದ್ದಾರೆ ಎಂದರು.

ಮಿಕ್ಸಿಯಲ್ಲಿ ಸ್ಪೋಟಕವಾಗಿ ಡೆಟೋನೇಟರ್ ಬಳಸಲು ರಾಮನಗರದಲ್ಲಿನ ಪ್ರಮುಖ ಕ್ವಾರಿ ಒಂದರಲ್ಲಿ ಎರಡು ಡೆಟೋನೇಟರ್‌ಗಳನ್ನು ಖರೀದಿಸಿ ಇಂಟರ್ನೆಟ್ ಮೂಲಕ ಬಾಂಬ್‌ತಯಾರಿಸುವ ಬಗ್ಗೆ ಮಾಹಿತಿಯನ್ನು ಪಡೆದು ಈತ ಡಿ. 16 ರಂದು ಕೊರಿಯರ್‌ಮೂಲಕ ಮಿಕ್ಸಿಯನ್ನು ಹಾಸನದ ವಸಂತಾ ಅವರಿಗೆ ಕಳುಹಿಸಿದ್ದಾನೆ. ನಂತರ ಡಿ. 26ರ ವರೆಗೆ ಕೊರಿಯರ್‌ವಸಂತಾ ಅವರಿಗೆ ತಲುಪಿದೆಯೆ ಎಂಬುದರ ಬಗ್ಗೆ ಡಿಲಿವರಿ ಹಿಸ್ಟರಿ ಸರ್ಚ್‌ಮಾಡಿರುವ ಮತ್ತು ಹಾಸನದಲ್ಲಿ ಬಾಂಬ್‌ಬ್ಲಾಸ್ಟ್ ಆಗಿದೆಯೇ ಎಂಬ ಸುದ್ದಿಯನ್ನು ಹುಡುಕಿರುವ ಬಗ್ಗೆಯೂ ಆತನ ಮೊಬೈಲ್‌ನ ಸರ್ಚ್ ಹಿಸ್ಟರಿಯಿಂದ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.

ವಸಂತಾ ಅವರಿಗೆ ವಿಡಿಯೋ ಕಳಿಸುವ ಸಂದರ್ಭದಲ್ಲಿ ಮೀನಿನ ಅಕ್ವೇರಿಯಂ ನಲ್ಲಿ ಬಳಸುವ ಸಣ್ಣ ಸಣ್ಣಕಲ್ಲುಗಳಿಗೆ ಚಿನ್ನದ ಲೇಪನವನ್ನು ಹಾಕಿ ತನ್ನ ಬಳಿ ಸಾಕಷ್ಟು ಚಿನ್ನದ ಗಟ್ಟಿ ಇರುವ ಬಗ್ಗೆ ತೋರಿಸಿದ್ದಾನೆ ಹಾಗೂ ಸಿನಿಮಾಗಳಲ್ಲಿ ತೋರಿಸುವಂತೆ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿಸಿ ಲಕ್ಷಾಂತರರು ಹಣ ಹೊಂದಿರುವುದಾಗಿಯೂ ಅನೂಪ್ ತೋರ್ಪಡಿಸಿದ್ದಾನೆ ಎಂದು ತಿಳಿಸಿದರು.

ಇದೀಗ ಬೆಂಗಳೂರಿನ ಸುತ್ತ ಮುತ್ತ ಮಿಕ್ಸಿ ಖರೀದಿ ಹಾಗೂ ಡೆಕೋನೇಟರ್ ಖರೀದಿ ಸಂಬಂಧ ಮಾಹಿತಿ ಪಡೆಯಲು ಪೊಲೀಸರು ಅನೂಪ್ ನನ್ನು ಕರೆದೋಯ್ದಿದ್ದು ಡಿವೈಎಸ್ಪಿ ಉದಯಭಾಸ್ಕರ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ ಎಂದರು.

193 ರೌಡಿಶೀಟರ್ ಪಟ್ಟಿಯಿಂದ ತೆರವು:
ಸನ್ನಡತೆ ಆಧಾರದ ಮೇಲೆ ಜಿಲ್ಲೆಯ 193 ರೌಡಿಶೀಟರ್‌ಗಳನ್ನು ಮಂಗಳವಾರ ರೌಡಿಶೀಟರ್ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1800 ರೌಡಿಶೀಟರ್ ಗಳಿದ್ದು ಕಳೆದ ವರ್ಷ ನೂರಕ್ಕೂ ಹೆಚ್ಚು ಮಂದಿಯನ್ನು ಸನ್ನಡತೆ ಆಧಾರದ ಮೇಲೆ ರೌಡಿಶೀಟರ್ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಇದೀಗ ಎಡಿಜಿಪಿ ಅಲೋಕ್ ಕುಮಾರ್ ಅವರ ಮಾರ್ಗದರ್ಶನದಂತೆ ಹಾಗೂ ಸನ್ನಡತೆ ಆಧಾರದ ಮೇಲೆ ಪಟ್ಟಿಯಿಂದ ತೆರವು ನಿಯಮಗಳ ಅನ್ವಯ 193 ಮಂದಿಯನ್ನು ಪಟ್ಟಯಿಂದ ಬಿಡುಗಡೆ ಮಾಡಲಾಗುತ್ತಿದೆ ಮತ್ತೆ ಈ ವ್ಯಕ್ತಿಗಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದಲ್ಲಿ ಮತ್ತೆ ರೌಡಿಶೀಟರ್ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಎಸ್ ಪಿ ಹರಿರಾಂ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net