ಮಾಹಿತಿ ಕೊರತೆಯಿಂದ ಜಿಪಂ ಉಪಾಧ್ಯಕ್ಷರಿಂದ ಶಾಸಕರ ವಿರುದ್ಧ ಆರೋಪ: ಬಿಜೆಪಿ ನಗರಾಧ್ಯಕ್ಷ ಎಸ್.ಕೆ.ವೇಣುಗೋಪಾಲ್ ತಿರುಗೇಟು

Published on

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರದಿಂದ
300 ಕೋಟಿ ರೂ. ಅನುದಾನ ತಂದಿರುವ ಶಾಸಕ ಪ್ರೀತಂ ಜೆ. ಗೌಡ 20 ವರ್ಷಗಳಿಂದ ಆಗದ ಕೆಲಸಗಳನ್ನು ಕೇವಲ 2 ವರ್ಷಗಳಲ್ಲಿ ಮಾಡುತ್ತಿದ್ದಾರೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಎಸ್.ಕೆ. ವೇಣುಗೋಪಾಲ್ ಹೇಳಿದರು.

ಮಾಹಿತಿ ಕೊರತೆಯಿಂದ ಜಿಪಂ ಉಪಾಧ್ಯಕ್ಷ ಎಚ್.ಪಿ.‌ಸ್ವರೂಪ್ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪಕ್ಷ ವಹಿಸಿರುವ ಜವಾಬ್ದಾರಿ ನಿಭಾಯಿಸಬೇಕಿರುವುದರಿಂದ ಶಾಸಕರು ಶಿರಾ ಉಪಚುನಾವಣೆ ಪ್ರವಾಸ ಕೈಗೊಂಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.


ಕಸ ವಿಲೇವಾರಿ, ರಸ್ತೆ, ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಸುಧಾರಣೆಗೆ ಶಾಸಕರು ಆದ್ಯತೆ ನೀಡಿದ್ದಾರೆ ಎಂದರು. ಬಿಜೆಪಿ ನಗರ ಘಟಕದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net