

ಹುಬ್ಬಳ್ಳಿ: ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಿಲುಕಿಕೊಂಡಿದ್ದ ಬೇರೆ ರಾಜ್ಯಗಳ ವಲಸೆ ಕಾರ್ವಿುಕರಿಗೆ ಇಲ್ಲಿಯ ಜೆರಾಕ್ಸ್ ಅಂಗಡಿಗಳು ಮಾಹಿತಿ ಕೇಂದ್ರಗಳಾಗಿ ಮಾರ್ಪಟ್ಟಿದ್ದವು.
ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿರುವ ಖಾಸಗಿಯವರ 3 ಜೆರಾಕ್ಸ್ ಅಂಗಡಿಗಳು ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಇದೇ ಕೆಲಸವನ್ನು ಮಾಡಿವೆ. ಆದರೆ, ಈ ಜವಾಬ್ದಾರಿಯನ್ನು ನಿರ್ವಹಿಸಬೇಕಿದ್ದ ಪಕ್ಕದ ಮಿನಿ ವಿಧಾನಸೌಧದಲ್ಲಿರುವ ಹುಬ್ಬಳ್ಳಿ ನಗರ ತಹಸೀಲ್ದಾರ್ ಕಚೇರಿ ನಿರ್ಲಿಪ್ತವಾಗಿತ್ತು.
ವಲಸೆ ಕಾರ್ವಿುಕರು ವಿವರಗಳನ್ನು ದಾಖಲಿಸ ಬೇಕಿರುವ ಮನವಿ ಪ್ರತಿಯನ್ನು ತಲಾ 5 ರೂ. ನಂತೆ ಜೆರಾಕ್ಸ್ ಅಂಗಡಿಗಳು ಮಾರಾಟ ಮಾಡಿದವು. ಜತೆಗೆ ಈ ಮನವಿ ಪ್ರತಿಯನ್ನು ವಾಟ್ಸ್ಆಪ್ ನಂಬರ್ಗೆ ಅಪ್ಲೋಡ್ ಮಾಡಬೇಕೆಂದು ಅಂಗಡಿಗಳ ಹೊರಗೆ ಫಲಕ ನೇತು ಹಾಕಿದ್ದವು. ಅವು ಜಿಲ್ಲಾಡಳಿತ ಸೂಚಿಸಿದ್ದ ಅಧಿಕೃತ ವಾಟ್ಸ್ ಆಪ್ ನಂಬರ್ (ಮೊ-9449847646, 9449847641)ಗಳೇ ಆಗಿದ್ದವು.
ಜೆರಾಕ್ಸ್ ಅಂಗಡಿಗಳ ಎದುರು ಹಾಗೂ ಪಕ್ಕದ ಮಿನಿ ವಿಧಾನಸೌಧದ ಆವರಣದಲ್ಲಿ ನೂರಾರು ಜನ ವಲಸೆ ಕಾರ್ವಿುಕರು ಜಮಾಯಿಸಿದ್ದರು. ಸರದಿ ಸಾಲಿನಲ್ಲಿ ನಿಂತು ಮನವಿ ಪ್ರತಿಯನ್ನು ಪಡೆದರು. ಲ್ಯಾಮಿಂಗ್ಟನ್ ರಸ್ತೆಗೆ ಹೊಂದಿಕೊಂಡಿರುವ ಈ ಜೆರಾಕ್ಸ್ ಅಂಗಡಿಗಳು ಪರಸ್ಪರ ಅಂತರ ಕಾಯ್ದುಕೊಳ್ಳಲು ಫುಟ್ಪಾತ್ ಮೇಲೆ ಮಾರ್ಕಿಂಗ್ ಮಾಡಿದ್ದವು. ಮನವಿ ಪ್ರತಿಯಲ್ಲಿ ಪೂರ್ಣ ಹೆಸರು, ಹಾಲಿ ವಾಸ ಸ್ಥಳದ ವಿಳಾಸ, ತೆರಳಬೇಕಿರುವ ರಾಜ್ಯ, ಜಿಲ್ಲೆ, ತಾಲೂಕು, ನಗರ, ಗ್ರಾಮಗಳ ವಿವರ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. 1 ಮನವಿ ಪ್ರತಿಯಲ್ಲಿ 9 ಜನ ವಿವರಗಳನ್ನು ಸಲ್ಲಿಸಿ ವಾಟ್ಸ್ ಆಪ್ ನಂಬರ್ಗೆ ಕಳುಹಿಸಬೇಕು.
ವಲಸೆ ಕಾರ್ವಿುಕರು ಮಿನಿ ವಿಧಾನಸೌಧದ ಆವರಣದಲ್ಲಿ ಕುಳಿತು ಮನವಿ ಪ್ರತಿಯಲ್ಲಿ ವಿವರಗಳನ್ನು ದಾಖಲಿಸಿದರು. ಇವರಿಗೆ ಮಾರ್ಗದರ್ಶನ ಮಾಡುವ ಯಾವುದೇ ರೀತಿಯ ಪ್ರಯತ್ನಗಳು ಸರ್ಕಾರಿ ಅಧಿಕಾರಿ/ಸಿಬ್ಬಂದಿಯಿಂದ ನಡೆಯಲಿಲ್ಲ. ತಹಸೀಲ್ದಾರ್ ಕಚೇರಿ ಹಾಗೂ ಪಾಲಿಕೆ ವಲಯ ಕಚೇರಿಗಳಲ್ಲಿ ವಲಸೆ ಕಾರ್ವಿುಕರಿಗೆ ಅಗತ್ಯ ನೆರವು ನೀಡಬೇಕೆಂಬ ನಿರ್ದೇಶನ ಸರ್ಕಾರದಿಂದ ಇದೆ. ಭಾಷಾ ಸಮಸ್ಯೆಯಿಂದ ವಲಸೆ ಕಾರ್ವಿುಕರು ತೊಂದರೆಗೆ ಒಳಗಾಗುವ ಸಾಧ್ಯತೆಗಳಿರುತ್ತದೆ ಎಂಬ ಕಲ್ಪನೆ ಅಧಿಕಾರಿಗಳಿಗೆ ಇದ್ದಂತಿಲ್ಲ. ಕಚೇರಿಯಲ್ಲಿ ವೆಬ್ಸೈಟ್ ವಿಳಾಸ (ಡಿಡಿಡಿ.ಠಛಿಡಚಠಜ್ಞಿಛಜ್ಠ.kಚ್ಟ್ಞಠಿಚkಚ.ಜಟಡ.ಜ್ಞಿ) ವನ್ನು ಅಂಟಿಸಿಕೊಂಡು ಕುಳಿತಿದ್ದಾರೆ. ವಾಟ್ಸ್ಆಪ್ ನಂಬರ್ ಎಲ್ಲಿಯೂ ಉಲ್ಲೇಖವಿಲ್ಲ.
ಭಾನುವಾರ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಮೂಲದ ವಲಸೆ ಕಾರ್ವಿುಕರಿಗೆ ವೆಬ್ಸೈಟ್ ವಿಳಾಸ ಹೇಳಿ ಲಾಗಿನ್ ಆಗಿ ಎಂದು ಹೇಳಿ ಹೇಳಿ ಕಳುಹಿಸಲಾಗಿತ್ತು. ಇದರಿಂದ ನಿರಾಶರಾಗಿ ವಾಪಸ್ ತೆರಳಿದ್ದ ಬಹುತೇಕ ಜನರು ಸೋಮವಾರ ಆಗಮಿಸಿ ತಮ್ಮ ಮನವಿಯನ್ನು ವಾಟ್ಸ್ಆಪ್ ನಂಬರ್ಗೆ ಸಲ್ಲಿಸಿದ್ದಾರೆ. ವೆಬ್ಸೈಟ್ಗಿಂತ ಇದು ಸರಳ ಎಂಬುದು ಅವರ ಗಮನಕ್ಕೆ ಬಂದಂತಿದೆ.
ಸೇವಾ ಸಿಂಧು ವೆಬ್ಸೈಟ್ನಲ್ಲಿ ಭಾನುವಾರ ಸಂಜೆಯವರೆಗೆ 914 ವಲಸೆ ಕಾರ್ವಿುಕರಿಂದ ತಾಯ್ನಾಡಿಗೆ ಕಳುಹಿಸುವಂತೆ ಕೋರಿ ಮನವಿ ಬಂದಿವೆ. ಇವು ಹಾಗೂ ವಾಟ್ಸ್ಆಪ್ ಮೂಲಕ ಬಂದ ಮನವಿಯನ್ನು ಪರಿಶೀಲಿಸಿ ರೈಲು ಅಥವಾ ಬಸ್ಸಿನಲ್ಲಿ ವಲಸೆ ಕಾರ್ವಿುಕರನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತೇವೆ.| ಪುರುಷೋತ್ತಮ ಎನ್.ಆರ್. ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ