ಮಾಸ್ತಮ್ಮ ದೇವಿಯ ಭವ್ಯ ಮೆರವಣಿಗೆ

Masthammadevi
Published on

ಚಿತ್ರದುರ್ಗ: ಸಂಕ್ರಾಂತಿ ಹಬ್ಬ ಹಾಗೂ ಪ್ರಸಕ್ತ ಸಾಲಿನ ಧನುರ್ಮಾಸ ಪೂಜೆ ಮುಕ್ತಾಯದ ಅಂಗವಾಗಿ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಮಾಸ್ತಮ್ಮ ದೇವಿಯ ಮೆರವಣಿಗೆ ಸೋಮವಾರ ಅದ್ದೂರಿಯಾಗಿ ಜರುಗಿತು.

ದೇವಿಯ ಭಾವಚಿತ್ರವನ್ನು ಟ್ರಾೃಕ್ಟರ್‌ನಲ್ಲಿ ಕೂರಿಸಿ ಪುಷ್ಪಗಳಿಂದ ಸಿಂಗರಿಸಲಾಯಿತು. ನಂತರ ರಾಜಮಾತೆ ಉಚ್ಚಂಗಿಯಲ್ಲಮ್ಮ ದೇಗುಲ ಮುಂಭಾಗದಿಂದ ಆರಂಭವಾದ ಮೆರವಣಿಗೆ ದೊಡ್ಡಪೇಟೆ, ರಂಗಯ್ಯನಬಾಗಿಲು, ಜೋಗಿಮಟ್ಟಿ ರಸ್ತೆ ಮಾರ್ಗವಾಗಿ ಸಂಚರಿಸಿ ದೇಗುಲ ತಲುಪಿತು.

ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಗೆ ಮೆರುಗು ನೀಡಿದರು. ಉರುಮೆ, ತಮಟೆ, ಡೊಳ್ಳು ಸೇರಿ ಇತರೆ ಜನಪದ ಕಲಾತಂಡಗಳ ಮಂಗಳವಾದ್ಯದೊಂದಿಗೆ ಸಾಗಿತು. ಯುವಕರು ಕುಣಿದು ಸಂಭ್ರಮಿಸಿದರು.

ನಗರಸಭೆ ಸದಸ್ಯರಾದ ಆರ್.ನಾಗಮ್ಮ, ಭಾಸ್ಕರ್, ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮಾಜಿ ಸದಸ್ಯ ಮಹೇಶ್, ಗುತ್ತಿಗೆದಾರ ಕುಮಾರಸ್ವಾಮಿ, ದೇವಸ್ಥಾನದ ಭಕ್ತ ಮಂಡಳಿ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net