ಮಾಸ್ಟರ್-೨೬ ಸ್ಪರ್ಧೆಯಲ್ಲಿ ಎಸ್‌ಬಿಆರ್ ವಿದ್ಯಾರ್ಥಿನಿಯರು ಮಿಂಚು

2210 KLB 01
Published on

ಕಲಬುರಗಿ: ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಅನುಷ್ಕಾ ಕಾಮಶೆಟ್ಟಿ ಮತ್ತು ಸಯೀದಾ ರಾನಿಯಾ ರಾಷ್ಟç ಮಟ್ಟದ ಮಾಸ್ಟರ್-೨೬ ಸ್ಪರ್ಧೆಯಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.

ನವದೆಹಲಿ ಹೊಳಂಬಿಯ ಖುರ್ಡ್ನಲ್ಲಿರುವ ಮಾನ್ ಶಾಲೆಯಲ್ಲಿ ನಡೆದ ಮಾಸ್ಟರ್-೨೬ ಚಾಂಪಿಯನ್‌ಷಿಪ್‌ನಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ತೋರಿದ್ದು, ಅನುಷ್ಕಾ ಪ್ರಥಮ, ಸಯೀದಾ ರಾನಿಯಾ ದ್ವಿತೀಯ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ರಾಷ್ಟç ಮಟ್ಟದ ಇಂಡಿಯನ್ ಪಬ್ಲಿಕ್ ಶಾಲೆಗಳ ಸಮೂಹ ಏರ್ಪಡಿಸುವ ಈ ಸ್ಪರ್ಧೆಯಲ್ಲಿ ದೇಶದ ಪ್ರತಿಷ್ಠಿತ ಶಾಲೆಗಳ ಒಂದು ವಿಷಯ, ಶಬ್ದದ ಕುರಿತು ವಿಸ್ತÈತ ಮಾಹಿತಿ, ಸಂಗ್ರಹ ಹೊಂದಿದ ಪ್ರತಿಭೆಗಳು ಭಾಗವಹಿಸುತ್ತಾರೆ. ಹಿಂದೆ ಎರಡು ಬಾರಿ ಚಾಂಪಿಯನ್‌ಷಿಪ್ ಗೆದ್ದುಕೊಂಡಿರುವ ಕಾಲೇಜು ಇದೀಗ ಮೂರನೇ ಸಲ ಟ್ರೋಫಿ ಪಡೆದಂತಾಗಿದೆ.
ಸಾಧಕ ವಿದ್ಯಾರ್ಥಿನಿಯರನ್ನು ಸಂಸ್ಥೆ ಅಧ್ಯಕ್ಷರಾದ ಶ್ರೀ ಡಾ.ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಅಭಿನಂದಿಸಿದ್ದಾರೆ. ಸಂಸ್ಥೆ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರಾಚಾರ್ಯ ಎನ್.ಎಸ್. ದೇವರಕಲ್, ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಚಾರ್ಯರು ಶುಭ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net