ಮಾಸ್ಕ್ ಧರಿಸದಿದ್ದರೆ ದಂಡ

dc ramchandran
Published on

ಬೀದರ್: ಕರೊನಾ ವೈರಸ್‌ನಿಂದ ದೂರವಿರಲು ಮಾಸ್ಕ್ ಧರಿಸುವುದೊಂದೇ ಸುಲಭ ಮಾರ್ಗ. ಈ ಸೋಂಕನ್ನು ತಡೆಯಲು ಮಾಸ್ಕ್ ಔಷಧದಂತೆ ಕೆಲಸ ಮಾಡುತ್ತದೆ. ಹೀಗಾಗಿ ಇನ್ಮುಂದೆ ಕಡ್ಡಾಯವಾಗಿ ಮಾಸ್ಕ್ ಧರಿಸದಿದ್ದರೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ತಿಳಿಸಿದ್ದಾರೆ. ಕರೊನಾ ಔಷಧ ಪ್ರಯೋಗ ಯಶಸ್ವಿಯಾಗುವ ಮೊದಲು ಮಾಸ್ಕ್ ಮಾತ್ರ ಲಭ್ಯ ಅತ್ಯುತ್ತಮ ಲಸಿಕೆಯಂತಿದೆ. ಮಾಸ್ಕ್ ಧರಿಸಿ ವೈರಸ್‌ನಿಂದ ರಕ್ಷಿಸಿಕೊಳ್ಳಬಹುದು. ಇದಕ್ಕೆ ಜಿಲ್ಲೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಾಸ್ಕ್ ಧರಿಸದವರನ್ನು ಗುರುತಿಸಿ ದಂಡ ವಿಧಿಸಿರುವ ಕ್ರಮ ಈಗ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಈ ಬಗ್ಗೆ ಪ್ರತಿ ದಿನ ಜಿಲ್ಲಾಮಟ್ಟದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ನಗರಸಭೆ, ಪಟ್ಟಣ ಪಂಚಾಯತಿ, ಪುರಸಭೆ ಸ್ಥಳೀಯ ಆಡಳಿತದ ಅಧಿಕಾರಿಗಳಿಗೆ ದಂಡ ಹೇರಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net