ಮಾಸ್ಕ್ ಧರಿಸದ ಸವಾರರಿಗೆ ದಂಡ

27ang2
Published on

ಅಣ್ಣಿಗೇರಿ: ಪಟ್ಟಣದಲ್ಲಿ ಕರೊನಾ ಸೋಂಕು ಹರಡದಂತೆ ಜಿಲ್ಲಾಡಳಿತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಕೆಲವು ನಿರ್ಬಂಧಗಳನ್ನು ಹೇರಿದೆ. ಆದರೂ ಸಾರ್ವಜನಿಕರು ಅವುಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಶನಿವಾರ ಸಂಜೆ 50ಕ್ಕೂ ಹೆಚ್ಚು ಬೈಕ್, ಕಾರುಗಳನ್ನು ತಡೆದು ದಂಡ ಹಾಕಿದರು. ಮಾಸ್ಕ್ ಇಲ್ಲದೇ ಪಟ್ಟಣದಲ್ಲಿ ಓಡಾಡುತ್ತಿದ್ದ ಬೈಕ್ ಸವಾರರಿಗೆ 100 ರೂ., 200 ರೂ. ದಂಡ ಹಾಕಿ ನಂತರ ಬಿಡಲಾಯಿತು. ಪ್ರತಿಯೊಬ್ಬರೂ ಸರ್ಕಾರದ ನಿಯಮವನ್ನು ಪಾಲಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಇಂದಿನ ದಿನಮಾನಗಳಲ್ಲಿ ಅತ್ಯಗತ್ಯವಾಗಿದೆ. ಅನವಶ್ಯಕವಾಗಿ ಯಾರೂ ಹೊರಗಡೆ ಓಡಾಡಬಾರದು. ಅವಶ್ಯವಿದ್ದರೇ ಮಾತ್ರ ಮಾಸ್ಕ್ ಧರಿಸಿ, ಕೈಗೆ ಸ್ಯಾನಿಟೈಸರ್ ಹಚ್ಚಿಕೊಂಡು ಮನೆಯಿಂದ ಹೊರಗಡೆ ಬರಬೇಕು ಎಂದು ಬೈಕ್ ಸವಾರರಿಗೆ ಹೆಚ್ಚುವರಿ ಠಾಣಾಧಿಕಾರಿ ಕೆ.ವಿ. ಸಿದ್ದನಗೌಡ್ರ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net