ಮಾಸಾಶನಕ್ಕೆ ನಾಗಮಾರಪಳ್ಳಿ ಫೌಂಡೇಷನ್ ನೆರವು

Nagmarpalli foundation
Published on

ಬೀದರ್: ಇಲ್ಲಿಯ ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಸಾಮಾಜಿಕ ಭದ್ರತಾ ಯೋಜನೆಗಳಡಿ ಅರ್ಹರಿಗೆ ಸೌಲಭ್ಯ ತಲುಪಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಧವಾ, ವೃದ್ಧಾಪ್ಯ ವೇತನ ಸೇರಿ ವಿವಿಧ ಯೋಜನೆಗಳಡಿ ಅರ್ಹರಿಗೆ ಮಾಸಾಶನ ಮಂಜೂರು ಮಾಡಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು, ದಾಖಲೆಗಳ ಅಪ್ ಲೋಡ್ ಸೇರಿ ಎಲ್ಲ ಕಾರ್ಯಗಳನ್ನು ಫೌಂಡೇಷನ್ ನಿಂದ ಮಾಡಿಕೊಡಲಾಗಿದೆ.

ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಫೌಂಡೇಷನ್ ಅಧ್ಯಕ್ಷ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಚಿಮಕೋಡ, ಬಸಂತಪುರ, ಮಿರ್ಜಾಪುರ, ಖಾಜಾಪುರ, ಹಮಿಲಾಪುರದ 35 ಜನರಿಗೆ ಮಂಜೂರಾತಿ ಪತ್ರ ನೀಡಿದರು.ಫರ್ನಾಂಡಿಸ್, ತರುಣ್ ನಾಗಮಾರಪಳ್ಳಿ, ಪ್ರಕಾಶ ಕಮಠಾಣೆ, ಭದ್ರೇಶ, ದಿಲೀಪ ಕಲಬರ್ಕೆ, ರಾಜಕುಮಾರ ಕಾಳೆ, ಯಲ್ಲಪ್ಪ ಮೇತ್ರೆ, ವಿಲ್ಸನ್ ಚಿಲ್ಲರ್ಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net