ಮಾಸಾಂತ್ಯಕ್ಕೆ ಲೆಕ್ಕಪರಿಶೋಧನೆ ರ್ಪೂಣಗೊಳಿಸಿ : ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡ ಸೂಚನೆ, ಅಧಿಕಾರಿಗಳು, ವಿ.ಸಾಫ್ಟ್​ವೇರ್​ ಕಂಪನಿ ಸಿಬ್ಬಂದಿ ಸಭೆ

2
Published on

ಕೋಲಾರ: ಗಣಕೀಕೃತ ಲೆಕ್ಕ ಪುಸ್ತಕ ಆಧರಿಸಿ 2021&-22ನೇ ಸಾಲಿನ ಲೆಕ್ಕ ಪರಿಶೋಧನೆ ಏಪ್ರಿಲ್​ ಅಂತ್ಯದೊಳಗೆ ಮುಗಿಸಬೇಕು ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸೂಚಿಸಿದರು.

ನಗರದ ಡಿಸಿಸಿ ಬ್ಯಾಂಕ್​ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬ್ಯಾಂಕ್​ ಅಧಿಕಾರಿಗಳ ಹಾಗೂ ವಿ.ಸಾಫ್ಟ್​ವೇರ್​ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಬ್ಯಾಂಕ್​ನಲ್ಲಿ ಪ್ಯಾಕ್ಸ್​ಗಳ ಗಣಕೀಕರಣ ಮಾಡಿದ್ದು, ಇದು ರಾಷ್ಟ್ರದಲ್ಲೇ ಹೊಸ ಪ್ರಯೋಗವಾಗಿದೆ. ಬೆರಳ ತುದಿಯಲ್ಲಿ ಮಾಹಿತಿ ದೊರೆಯುವ ವ್ಯವಸ್ಥೆ ಮಾಡಲಾಗಿದ್ದು, ಇದು ಗ್ರಾಹಕರ ನಂಬಿಕ ಗಳಿಸುತ್ತಿದೆ. ಈ ವ್ಯವಸ್ಥೆಗೆ ಚ್ಯುತಿ ಬಾರದಂತೆ ಎಚ್ಚವಹಿಸಬೇಕು ಎಂದು ಹೇಳಿದರು.

ವಿ.ಸಾಫ್ಟ್​ವೇರ್​ ಕಂಪನಿಯವರು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ನಿರ್ಲಕ್ಷ$್ಯ ತೋರುತ್ತಿದ್ದಾರೆ. ಬ್ಯಾಂಕ್​ ಅಧಿಕಾರಿಗಳು, ಆಡಳಿತ ಮಂಡಳಿಯವರು ನಿಮ್ಮ ಹಿಂದೆ ಬಿದ್ದು ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಏಪ್ರಿಲ್​ ಅಂತ್ಯದೊಳಗೆ ಆಡಿಟ್​ ಆಗಬೇಕು. ಇದುವರೆಗೂ ಹೆಲ್ಪ್​ಲೈನ್​ ಸ್ಥಾಪನೆ ಮಾಡುವುದಕ್ಕೆ ನಿಮ್ಮಕೈಯಲ್ಲಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿ.ಸಾಫ್ಟ್​ವೇರ್​ ಕಂಪನಿ ಅಧಿಕಾರಿ ಶೇಷಗಿರಿಭಟ್​ ಮಾತನಾಡಿ, ಜಿಲ್ಲೆಯಲ್ಲಿ 11 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ್ಯಾಕ್ಸ್​ ಸಿಬ್ಬಂದಿ ಕಡೆಯಿಂದ ಸಹಕಾರ ದೊರೆಯುತ್ತಿಲ್ಲ. ಇದರಿಂದಾಗಿ ವಿಳಂಬವಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಅಸಮಾಧಾನಗೊಂಡ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್​ ಮಾತನಾಡಿ, ಬ್ಯಾಂಕ್​ ವ್ಯಾಪ್ತಿಯ ಸಿಬ್ಬಂದಿಗೆ ಗಣಕೀಕರಣ ಕುರಿತು ತರಬೇತಿ ನೀಡಲಾಗಿದೆ. ಕಂಪನಿಯ ಸಿಬ್ಬಂದಿ ಸರ್ವರ್​ ಸಮಸ್ಯೆ ಹೇಳಿಕೊಂಡು ಕೆಲಸದ ಕಡೆ ಗಮನಹರಿಸುತ್ತಿಲ್ಲ. ಕಂಪನಿಯವರು ್ಯಾಕ್ಸ್​ಗಳ ಸ್ಥಿತಿಗತಿ ಮಾಹಿತಿ ಪಡೆದುಕೊಳ್ಳಬೇಕು. ಒಂದು ಹಂತದ ತನಕ ಯಶಸ್ವಿಯಾಗಿ ಕೆಲಸ ಮುಗಿಸುವ ನಿಮ್ಮ ಸಿಬ್ಬಂದಿ ನಂತರ ಸ್ಪಂದಿಸುವುದಿಲ್ಲ. ಮೊದಲು ಕಂಪನಿಯವರು ಕಾರ್ಯವೈಖರಿ ಬದಲಾಯಿಸಿಕೊಳ್ಳಿ ಎಂದು ಹೇಳಿದರು.

ಅಧ್ಯಕ್ಷ ಗೋವಿಂದಗೌಡ ಮಧ್ಯಪ್ರವೇಶಿಸಿ ಮಾತನಾಡಿ, ಕೌಶಲ ತರಬೇತಿ ಹೊಂದಿರುವ ಸಿಬ್ಬಂದಿಯನ್ನು ಎರಡೂ ಜಿಲ್ಲೆಯ ಶಾಖೆಗಳಿಗೆ ನೇಮಕ ಮಾಡಬೇಕು. ನಮ್ಮ ವೇಗಕ್ಕೆ ನೀವು ಕೆಲಸ ಮಾಡಿದ್ದರೆ ಈಗಾಗಲೇ ಲೆಕ್ಕ ಪರಿಶೋಧನೆ ಮುಗಿಸಬಹುದಾಗಿತ್ತು. ಕೆಲಸದ ವಿಚಾರದಲ್ಲಿ ಎಲ್ಲರಿಗೂ ಗಂಭೀರತೆ ಇರಬೇಕು. ನಮ್ಮ ಅಧಿಕಾರಿ ಅಥವಾ ಸಿಬ್ಬಂದಿ ವೈಲ್ಯ ಇದ್ದರೆ ಹೇಳಿ ಸರಿಪಡಿಸುತ್ತೇವೆ ತಿಳಿಸಿದರು.

ಮುಂದಿನ ವಾರದೊಳಗೆ ಪ್ರತಿ ಶಾಖೆಗೊಬ್ಬರು ತಾಂತ್ರಿಕ ಸಿಬ್ಬಂದಿ ನೇಮಕ ಮಾಡಬೇಕು.  ಆರಂಭದಲ್ಲಿ ಇದ್ದ ವೇಗ ಈಗ ನಿಮ್ಮಲ್ಲಿ ಕಡಿಮೆಯಾಗಿದೆ. ಸಬೂಬು ಹೇಳದೆ ಕೆಲಸ ಮಾಡಿ. ನಿಮ್ಮ ಕೈಯಲ್ಲಿ ಆಗದಿದ್ದರೆ ಬಿಟ್ಟು ಹೋಗಿ ಎಂದು ಎಚ್ಚರಿಕೆ ನೀಡಿದರು. ಎಜಿಎಂ ನಾಗೇಶ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net